ಹಾಸನಾಂಬೆ ದರ್ಶನೋತ್ಸವದ ಕೊನೇ ದಿನ ದೇವಿಯ ಸಮ್ಮುಖದಲ್ಲಿ ಮಹಿಳೆಯೊಬ್ಬರ ವಿಚಿತ್ರ ವರ್ತನೆ
ಮಹಿಳೆಯ ಬಲಭಾಗಕ್ಕೆ ಅರತಿ ತಟ್ಟೆ ಹಿಡಿದು ದೇವಿಯ ದರ್ಶನ ಪಡೆಯುತ್ತಿರುವ ಭಕ್ತರೊಬ್ಬರು ಆಕೆಯ ವರ್ತನೆ ಕಂಡು ಗಾಬರಿಯಾಗುತ್ತಾರೆ!
ಹಾಸನಾಂಬೆ ದರ್ಶನೋತ್ಸವಕ್ಕೆ (Hasanambe Darshanotsav) ಇಂದು (ಬುಧವಾರ) ಕೊನೆಯ ದಿನ. ಇವತ್ತು ಸಾಯಂಕಾಲ ಹಾಸನಾಂಬೆ ದೇವಸ್ಥಾನ ಮುಚ್ಚಿಕೊಂಡರೆ ಪುನಃ ಮುಂದಿನ ವರ್ಷವೇ ತೆರೆದುಕೊಳ್ಳುತ್ತದೆ. ದೇವಿಯ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿ (strange behaviour) ಕೂಗಾಡಿದ ಘಟನೆ ಇಂದು ನಡೆಯಿತು. ಅವರ ಗುರುತು ಪರಿಚಯ ನಮಗಿಲ್ಲ, ಆದರೆ ಅವರ ಜೊತೆ ಬಂದಿದ್ದ ವ್ಯಕ್ತಿಯೊಬ್ಬರು ಹಣೆಗೆ ಕುಂಕುಮ (vermilion) ಹಚ್ಚಿದ ಕೂಡಲೇ ಶಾಂತರಾಗಿಬಿಡುತ್ತಾರೆ. ಅದಕ್ಕೂ ಮೊದಲು ಅವರನ್ನು ಸಮಾಧಾನಪಡಿಸಲು ಮುಂದಾಗುವ ಪೊಲೀಸರು ತಮ್ಮ ಪ್ರಯತ್ನದಲ್ಲಿ ವಿಫಲರಾಗುತ್ತಾರೆ. ಮಹಿಳೆಯ ಬಲಭಾಗಕ್ಕೆ ಅರತಿ ತಟ್ಟೆ ಹಿಡಿದು ದೇವಿಯ ದರ್ಶನ ಪಡೆಯುತ್ತಿರುವ ಭಕ್ತರೊಬ್ಬರು ಆಕೆಯ ವರ್ತನೆ ಕಂಡು ಗಾಬರಿಯಾಗುತ್ತಾರೆ!
Latest Videos