ಈ ಗಂಡ ಹೆಂಡ್ತಿ ಜಗಳ ಕಾರಿಗೆ ಬೆಂಕಿ ಹಚ್ಚುವ ತನಕ: ಪತ್ನಿ ಕೃತ್ಯಕ್ಕೆ ಕಣ್ಣೀರಿಟ್ಟ ಪತಿ
ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂದು ಈ ಹಿಂದೆ ಹಿರಿಯರು ಹೇಳಿದ್ರು. ಆದ್ರೆ, ಈ ದಂಪತಿ ಕಲಹ ಕಾರು ಸುಡುವ ತನಕ ಹೋಗಿದೆ. ಹೌದು... ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹೆಂಡತಿಯೇ ಕಟ್ಟಿಕೊಂಡ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ, (ಅಕ್ಟೋಬರ್ 09): ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂದು ಈ ಹಿಂದೆ ಹಿರಿಯರು ಹೇಳಿದ್ರು. ಆದ್ರೆ, ಈ ದಂಪತಿ ಕಲಹ ಕಾರು ಸುಡುವ ತನಕ ಹೋಗಿದೆ. ಹೌದು… ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹೆಂಡತಿಯೇ ಕಟ್ಟಿಕೊಂಡ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವನಗೌಡ ಪಾಟೀಲ್ ಹಾಗೂ ಪತ್ನಿ ಸಾವಿತ್ರಿ ಪಾಟೀಲ್ ಆಸ್ತಿ, ಹಣಕ್ಕಾಗಿ ಮನೆಯಲ್ಲಿ ಕಿತ್ತಾಡುತ್ತಿದ್ದರು. ಆದ್ರೆ, ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಪತ್ನಿ ಪೆಟ್ರೋಲ್ ಸುರಿದು ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಕಾರಿಗೆ ಬೆಂಕಿ ಬೀಳ್ತಿದ್ದಂತೆ ಪತಿ ಶಿವನಗೌಡ ಪಾಟೀಲ್ ಕಿರುಚಾಡಿದ್ದಾರೆ. ಆದ್ರೆ ಅತ್ತ ಕಾರು ಮಾತ್ರ ಸುಟ್ಟು ಕರಕಲಾಗಿದೆ. ಪತ್ನಿಯ ಈ ಕೆಲಸಕ್ಕೆ ಗಂಡ ಶಿವನಗೌಡ ಪಾಟೀಲ್ ಕಣ್ಣೀರಿಟ್ಟಿದ್ದು, ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ.
