World Cup 2025: 38 ಎಸೆತಗಳಲ್ಲಿ 94 ರನ್ ಚಚ್ಚಿದ ರಿಚಾ ಘೋಷ್; ವಿಡಿಯೋ ನೋಡಿ
Richa Ghosh 94 runs: 2025ರ ಮಹಿಳಾ ವಿಶ್ವಕಪ್‌ನಲ್ಲಿ ರಿಚಾ ಘೋಷ್, ದಕ್ಷಿಣ ಆಫ್ರಿಕಾ ವಿರುದ್ಧ 77 ಎಸೆತಗಳಲ್ಲಿ 94 ರನ್ ಗಳಿಸಿ ಭಾರತವನ್ನು ಸಂಕಷ್ಟದಿಂದ ಪಾರುಮಾಡಿದರು. 8ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಏಕದಿನ ಸ್ಕೋರ್ ಗಳಿಸಿದ ದಾಖಲೆ ಬರೆದ ರಿಚಾ, ಸ್ನೇಹ್ ರಾಣಾ ಜೊತೆ 88 ರನ್ ಗಳ ಅತ್ಯುತ್ತಮ ಪಾಲುದಾರಿಕೆ ನೀಡಿ ಟೀಂ ಇಂಡಿಯಾ 251 ರನ್ ಗಳಿಸಲು ನೆರವಾದರು. ಇದು ನಿಜಕ್ಕೂ ಸ್ಮರಣೀಯ ಪ್ರದರ್ಶನ.
2025 ರ ಮಹಿಳಾ ವಿಶ್ವಕಪ್‌ನಲ್ಲಿ, ಭಾರತೀಯ ವಿಕೆಟ್ ಕೀಪರ್ ರಿಚಾ ಘೋಷ್ ಯಾವುದೇ ಕ್ರಿಕೆಟ್ ಅಭಿಮಾನಿ ಮರೆಯದ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧ, ರಿಚಾ ಘೋಷ್ 77 ಎಸೆತಗಳಲ್ಲಿ 94 ರನ್ ಗಳಿಸಿದರು. ಅವರು ಶತಕವನ್ನು ತಪ್ಪಿಸಿಕೊಂಡರಾದರೂ ಅವರ ಇನ್ನಿಂಗ್ಸ್ ಶತಕಕ್ಕಿಂತ ಕಡಿಮೆ ಏನಿಲ್ಲ. ಏಕೆಂದರೆ ಒಂದು ಹಂತದಲ್ಲಿ ಟೀಂ ಇಂಡಿಯಾ 153 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ರಿಚಾ ಘೋಷ್ ಅವರ ಅತ್ಯುತ್ತಮ ಬ್ಯಾಟಿಂಗ್ ಟೀಂ ಇಂಡಿಯಾ 251 ರನ್‌ಗಳನ್ನು ತಲುಪಲು ಸಹಾಯ ಮಾಡಿತು.
ರಿಚಾ ಘೋಷ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸಿಡಿದವು. ಆದಾಗ್ಯೂ, ರಿಚಾ ಅವರು ಎದುರಿಸಿದ ಒಟ್ಟಾರೆ 77 ಎಸೆತಗಳಲ್ಲಿ, 39 ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದಾಗ್ಯೂ, ಉಳಿದ 38 ಎಸೆತಗಳಲ್ಲಿ ಅವರು 94 ರನ್ ಬಾರಿಸಿದರು.
ರಿಚಾ ಘೋಷ್ 8ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಿ ಮಹಿಳಾ ಕ್ರಿಕೆಟಿಗನ ಅತಿ ಹೆಚ್ಚು ಏಕದಿನ ಸ್ಕೋರ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಹಿಂದೆ, ಶ್ರೀಲಂಕಾ ವಿರುದ್ಧ 74 ರನ್ ಗಳಿಸಿದ ಕ್ಲೋಯ್ ಟ್ರಯಾನ್ಸ್ ಈ ದಾಖಲೆಯನ್ನು ಹೊಂದಿದ್ದರು. ರಿಚಾ ಈಗ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಘೋಷ್ ಮತ್ತು ಸ್ನೇಹ್ ರಾಣಾ ಎಂಟನೇ ವಿಕೆಟ್‌ಗೆ 88 ರನ್ ಸೇರಿಸಿದರು, ಇದು ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಪಾಲುದಾರಿಕೆಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

