ಬಿಗ್ ಬಾಸ್ ಹನುಮಂತನ ಮದುವೆ ಯಾಕೆ ತಡ ಆಗುತ್ತಿದೆ? ಕಾರಣ ತಿಳಿಸಿದ ಗೋಲ್ಡ್ ಸುರೇಶ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಗಿದ ಕೂಡಲೇ ಮದುವೆ ಆಗುವುದಾಗಿ ಹನುಮಂತ ಹೇಳಿದ್ದರು. ಆದರೆ ಇನ್ನೂ ವಿವಾಹ ಆಗಿಲ್ಲ. ಆ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದಾರೆ. ‘ನಾವೆಲ್ಲ ಮುಂದೆ ನಿಂತು ಮದುವೆ ಮಾಡುತ್ತೇವೆ’ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ (Bigg Boss Kannada 11) ಮುಗಿದ ಕೂಡಲೇ ಮದುವೆ ಆಗುವುದಾಗಿ ಹನುಮಂತ (Hanumantha Lamani) ಹೇಳಿದ್ದರು. ಆದರೆ ಇನ್ನೂ ವಿವಾಹ ಆಗಿಲ್ಲ. ಆ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದಾರೆ. ‘ಅವನು ಮನೆ ಕಟ್ಟುತ್ತಿದ್ದಾನೆ. ಆ ಕೆಲಸ ಮುಗಿಯಲಿ. ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ನಾನೇ ಮದುವೆ ಮಾಡುತ್ತೇನೆ ಅಂತ ಹೇಳಿದ್ದೇನೆ. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ನಾವೆಲ್ಲ ಮುಂದೆ ನಿಂತು ಮದುವೆ ಮಾಡುತ್ತೇವೆ’ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ. ‘ಕೋಣ’ ಸಿನಿಮಾದಲ್ಲಿ ಗೋಲ್ಡ್ ಸುರೇಶ್ (Gold Suresh) ಅವರು ನಟಿಸಿದ್ದಾರೆ. ಆ ಸಿನಿಮಾದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 09, 2025 06:25 PM
