ಸ್ನೇಹಿತನನ್ನು ಕೊಡಲಿಯಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ: ಸ್ಫೋಟಕ ಕಾರಣ ಬಿಚ್ಚಿಟ್ಟ SP
ಸ್ನೇಹಿತನನ್ನೇ ಕೊಡಲಿಯಿಂದ ಕೊಚ್ಚಿ ಕೊಂದು ಬಳಿಕ ತಾನೇ ಹೋಗಿ ಪೊಲೀಸರಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ನಡೆದಿದೆ. ಗಿರಿಯಾಲ‌್ ಗ್ರಾಮದ ಮಂಜುನಾಥ ಗೌಡರ(30) ಕೊಲೆಯಾದ ಯುವಕ. ದಯಾನಂದ ಗುಂಡ್ಲೂರ ಎನ್ನುವಾತನೇ ಹತ್ಯೆ ಮಾಡಿದ ಆರೋಪಿ. ದಯಾನಂದ ಗುಂಡ್ಲೂರ ಹಾಗೂ ಕೊಲೆಯಾದ ಮಂಜುನಾಥ ಗೌಡರ ಸ್ನೇಹಿತರಾಗಿದ್ದು, ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಹಯಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಸಿಟಿನಲ್ಲಿ ದಯಾನಂದ, ಸ್ನೇಹಿತ ಮಂಜುನಾಥನನ್ನು ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದಾನೆ. ಬಳಿಕ ಮಂಜುನಾಥನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆರೋಪಿ ದಯಾನಂದ ನೇರವಾಗಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.
ಬೆಳಗಾವಿ, (ಅಕ್ಟೋಬರ್ 27): ಸ್ನೇಹಿತನನ್ನೇ ಕೊಡಲಿಯಿಂದ ಕೊಚ್ಚಿ ಕೊಂದು ಬಳಿಕ ತಾನೇ ಹೋಗಿ ಪೊಲೀಸರಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ನಡೆದಿದೆ. ಗಿರಿಯಾಲ‌್ ಗ್ರಾಮದ ಮಂಜುನಾಥ ಗೌಡರ(30) ಕೊಲೆಯಾದ ಯುವಕ. ದಯಾನಂದ ಗುಂಡ್ಲೂರ ಎನ್ನುವಾತನೇ ಹತ್ಯೆ ಮಾಡಿದ ಆರೋಪಿ. ದಯಾನಂದ ಗುಂಡ್ಲೂರ ಹಾಗೂ ಕೊಲೆಯಾದ ಮಂಜುನಾಥ ಗೌಡರ ಸ್ನೇಹಿತರಾಗಿದ್ದು, ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಹಯಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಸಿಟಿನಲ್ಲಿ ದಯಾನಂದ, ಸ್ನೇಹಿತ ಮಂಜುನಾಥನನ್ನು ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದ. ಬಳಿಕ ಮಂಜುನಾಥನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆರೋಪಿ ದಯಾನಂದ ನೇರವಾಗಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಸಂಬಂಧ SP ಶಾಕಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.
