UPSC ಆಕಾಂಕ್ಷಿಯಾಗಿದ್ದ ಪ್ರಿಯಕರನ ಕಥೆ ಮುಗಿಸಿದ ಪ್ರಿಯತಮೆ: ರಾಸಲೀಲೆ ವಿಡಿಯೋಕ್ಕಾಗಿ ನಡೆಯಿತು ಕೊಲೆ
ರಾಷ್ಟ್ರ ರಾಜಧಾನಿ ನವದೆಹಲಿಯ ಗಾಂಧಿ ವಿಹಾರ್ ಪ್ರದೇಶದ ಫ್ಲಾಟ್ ಒಂದರಲ್ಲಿ ಸುಟ್ಟು ಕರಕಲಾಗಿದ್ದ 32 ವರ್ಷ ವಯಸ್ಸಿನ ಯುಪಿಎಸ್‌ಸಿ ಆಕಾಂಕ್ಷಿ ರಾಮಕೇಶ್ ಮೀನಾ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬೆಂಕಿ ಅವಘಡ ಅನಿರೀಕ್ಷಿತವಾಗಿರಲಿಲ್ಲ. ಅಪಘಾತವಾಗಿರಲಿಲ್ಲ. ಆಕಸ್ಮಿಕವಂತೂ ಖಂಡಿತಾ ಅಲ್ಲ. ಈ ಯುವಕನ ಹತ್ಯೆಗೆ ಕಾರಣ ಬೇರೆ ಯಾರೋ ಅಲ್ಲ ಇದೇ ಸುರಸುಂದರಾಂಗಿ ಪ್ರೇಯಸಿ ಅಮೃತಾ ಚೌಹಾಣ್. ರಾಮಕೇಶ್ ಈ ಪ್ರಕರಣವು ಮೊದಲು ಬೆಂಕಿ ಆಕಸ್ಮಿಕವೆಂದು ಕಂಡುಬಂದರೂ ನಂತರ ಕೊಲೆ ಎಂದು ಸಾಬೀತಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಪ್ರೇಯಿಸಿಯೇ ಮಾಜಿ ಲವ್ವರ್ ಜತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.
ನವದೆಹಲಿ, (ಅಕ್ಟೋಬರ್ 27): ರಾಷ್ಟ್ರ ರಾಜಧಾನಿ ನವದೆಹಲಿಯ ಗಾಂಧಿ ವಿಹಾರ್ ಪ್ರದೇಶದ ಫ್ಲಾಟ್ ಒಂದರಲ್ಲಿ ಸುಟ್ಟು ಕರಕಲಾಗಿದ್ದ 32 ವರ್ಷ ವಯಸ್ಸಿನ ಯುಪಿಎಸ್‌ಸಿ ಆಕಾಂಕ್ಷಿ ರಾಮಕೇಶ್ ಮೀನಾ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬೆಂಕಿ ಅವಘಡ ಅನಿರೀಕ್ಷಿತವಾಗಿರಲಿಲ್ಲ. ಅಪಘಾತವಾಗಿರಲಿಲ್ಲ. ಆಕಸ್ಮಿಕವಂತೂ ಖಂಡಿತಾ ಅಲ್ಲ. ಈ ಯುವಕನ ಹತ್ಯೆಗೆ ಕಾರಣ ಬೇರೆ ಯಾರೋ ಅಲ್ಲ ಇದೇ ಸುರಸುಂದರಾಂಗಿ ಪ್ರೇಯಸಿ ಅಮೃತಾ ಚೌಹಾಣ್. ರಾಮಕೇಶ್ ಈ ಪ್ರಕರಣವು ಮೊದಲು ಬೆಂಕಿ ಆಕಸ್ಮಿಕವೆಂದು ಕಂಡುಬಂದರೂ ನಂತರ ಕೊಲೆ ಎಂದು ಸಾಬೀತಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಪ್ರೇಯಿಸಿಯೇ ಮಾಜಿ ಲವ್ವರ್ ಜತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.
ರಾಮಕೇಶ್ ಮೀನಾ ಹಾಗೂ ಹತ್ಯೆಯಾದ ರಾಮ್ಕೇಶ್ ಮೀನಾ ಲಿವಿಂಗ್ ಟುಗೆದರ್ನಲ್ಲಿದ್ದು, ಅಮೃತಾಳಿಗೆ ಗೊತ್ತಾಗದ ಹಾಗೆ ಅವಳ ಕೆಲವು ಖಾಸಗಿ ವಿಡಿಯೋಗಳನ್ನ ಚಿತ್ರಿಸಿಕೊಂಡಿದ್ದ. ಆದ್ರೆ ಈ ವಿಚಾರ ಅಮೃತಾಳಿಗೆ ಗೊತ್ತಾದಾಗ ವಿಡಿಯೀ ಡಿಲೀಟ್ ಮಾಡುವಂತೆ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಳು. ಆದ್ರೆ ರಾಮ್ಕೇಶ್ ವಿಡಿಯೋ ಡಿಲೀಟ್ ಮಾಡಲ್ಲ ಅಂದು ಬಿಟ್ಟಿದ್ದ. ಇದರಿಂದ ಆಕ್ರೋಶಗೊಂಡ ಅಮೃತಾ ಈ ಸಂಗತಿಯನ್ನ ತನ್ನ ಮಾಜಿ ಪ್ರಿಯಕರ ಸುಮಿತ್ ಕಶ್ಯಪ್ನಿಗೆ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದವರು ರಾಮ್ಕೇಶ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ.
ಅದರಂತೆ ಮೂವರು ಅಕ್ಟೋಬರ್ 6ರಂದು ರಾಮ್ಕೇಶ್ ಮೀನಾ ನಿವಾಸಕ್ಕೆ ತೆರಳಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹಂತಕಿ ಅಮೃತಾ ಚೌಹಾಣ್ ವಿಧಿ ವಿಜ್ಞಾನ ಶಾಸ್ತ್ರ ಪದವಿ ವಿದ್ಯಾರ್ಥಿನಿ ಆಗಿದ್ದು, ಕೊಲೆ ಬಳಿಕ ಸಾಕ್ಷ್ಯ ನಾಶಕ್ಕೂ ಖತರ್ನಾಕ್ ಪ್ಲ್ಯಾನ್ ಮಾಡಿದ್ದಳು. ಆತ್ಮಹತ್ಯೆ ಅಥವಾ ಆಕಸ್ಮಿಕ ಸಾವು ಎಂದು ಬಿಂಬಿಸಲು ರಾಮ್ಕೇಶ್ ಮೃತದೇಹದ ಮೇಲೆ ತುಪ್ಪ, ಎಣ್ಣೆ, ಮದ್ಯವನ್ನ ಸುರಿದಿದ್ದಾರೆ. ನಂತರ ಅಮೃತಾಳ ಮಾಜಿ ಪ್ರಿಯಕರ ಸುಮಿತ್ ಕಶ್ಯಪ್ ಎಲ್ಪಿಜಿ ವಿತರಕನಾಗಿದ್ದ. ಹೀಗಾಗಿ ತುಂಬಿದ್ದ ಸಿಲಿಂಡರ್ಗಳನ್ನು ಓಪನ್ ಮಾಡಿ ಮನೆ ಬಾಗಿಲು ಹಾಕಿ ಹೊರಗೆ ಬಂದು ಕಿಟಕಿ ಮೂಲಕ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ಅಂಶ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

