ವೇಶ್ಯೆಯರ ಸಹವಾಸ: ಮೊಮ್ಮಗನ ಪ್ರೀತಿ ತೋರಿದ ಅಜ್ಜಿಯನ್ನೇ ಕೊಂದವನಿಗೆ ಈಗ ಜೈಲು ವಾಸ
ಆಕೆಗೆ ಅದಾಗಲೇ 80 ವರ್ಷ ದಾಟಿತ್ತು.. ವಯಸ್ಸಾದ ಕಾಲದಲ್ಲಿ ಊರಿನ ಪುಟ್ಟ ಮನೆಯಲ್ಲಿ ಒಂಟಿಯಾಗಿ ವಾಸವಿದ್ದಳು.. ದೂರದ ಸಂಬಂಧಿಯಾದ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಯುವಕ ಮೊಮ್ಮಗನಂತೆ ಓಡಾಡಿಕೊಂಡಿದ್ದ.. ಅಜ್ಜಿಯೂ ಆತನಿಗೆ ಕೈತುತ್ತು ಕೊಟ್ಟು ಸಾಕಿದ್ಲು.. ಆದರೇ ಅಜ್ಜಿ ವಾತ್ಸಲ್ಯ ಮರೆತ ಆ ಯುವಕ ಹಣಕ್ಕಾಗಿ ಅಜ್ಜಿಯನ್ನೇ ಕೊಲೆಗೈದಿದ್ದ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಬಾಣಗೆರೆ ಹಳ್ಳಿಯಲ್ಲಿ ಅಜ್ಜಿ ಪುಟ್ಟೀರಮ್ಮ ಕೊಲೆಯಾದ ಅಜ್ಜಿ. ಯಾವುದೇ ಕ್ಲ್ಯೂ ಕೊಡದೇ ಕೃತ್ಯ ಎಸಗಿದವನ ಬೆನ್ನು ಬಿದ್ದ ಪೊಲೀಸರಿಗೆ ಕೊನೆಗೂ ಗೊತ್ತಾಗಿದ್ದು ಚಿನ್ನದ ಮೇಲಿನ ಆಸೆ.
ತುಮಕೂರು, (ನವೆಂಬರ್ 14): ಆಕೆಗೆ ಅದಾಗಲೇ 80 ವರ್ಷ ದಾಟಿತ್ತು.. ವಯಸ್ಸಾದ ಕಾಲದಲ್ಲಿ ಊರಿನ ಪುಟ್ಟ ಮನೆಯಲ್ಲಿ ಒಂಟಿಯಾಗಿ ವಾಸವಿದ್ದಳು.. ದೂರದ ಸಂಬಂಧಿಯಾದ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಯುವಕ ಮೊಮ್ಮಗನಂತೆ ಓಡಾಡಿಕೊಂಡಿದ್ದ.. ಅಜ್ಜಿಯೂ ಆತನಿಗೆ ಕೈತುತ್ತು ಕೊಟ್ಟು ಸಾಕಿದ್ಲು.. ಆದರೇ ಅಜ್ಜಿ ವಾತ್ಸಲ್ಯ ಮರೆತ ಆ ಯುವಕ ಹಣಕ್ಕಾಗಿ ಅಜ್ಜಿಯನ್ನೇ ಕೊಲೆಗೈದಿದ್ದ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಬಾಣಗೆರೆ ಹಳ್ಳಿಯಲ್ಲಿ ಅಜ್ಜಿ ಪುಟ್ಟೀರಮ್ಮ ಕೊಲೆಯಾದ ಅಜ್ಜಿ. ಯಾವುದೇ ಕ್ಲ್ಯೂ ಕೊಡದೇ ಕೃತ್ಯ ಎಸಗಿದವನ ಬೆನ್ನು ಬಿದ್ದ ಪೊಲೀಸರಿಗೆ ಕೊನೆಗೂ ಗೊತ್ತಾಗಿದ್ದು ಚಿನ್ನದ ಮೇಲಿನ ಆಸೆ.
ಪುಟ್ಟೀರಮ್ಮಗೆ ಅದಾಗಲೇ 80 ದಾಟಿತ್ತು. ಇಬ್ಬರು ಮಕ್ಕಳಿದ್ದರು ಆಕೆ ಒಂಟಿಯಾಗಿ ಹಳ್ಳಿಯಲ್ಲಿ ವಾಸವಿದ್ದಳು.. ಮಗಳಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರೇ, ಮಗ ವೀರಣ್ಣ ನಿವೃತ್ತ ಯೋಧ.. ಕರ್ತವ್ಯ ಪೂರ್ಣ ಬಳಿಕ ತುಮಕೂರು ನಗರದಲ್ಲೇ ನೆಲೆಸಿದ್ದ ವೀರಣ್ಣ ವಾರಕ್ಕೆ ಒಮ್ಮೆ ತಪ್ಪಿದರೇ ಎರಡು ಬಾರಿ ಬಂದು ಹೊಗುತಿದ್ದ.. ಈ ನಡುವೆ ಅಜ್ಕಿಯ ಸಾವು ವಯೋಸಹಜ ಎಂದು ಬಾವಿಸಲಾಗಿತ್ತು. ಹೀಗೆ ಎಲ್ಲರಲ್ಲೂ ಅಜ್ಜಿ ಸಾವು ವಯಸ್ಸಾಗಿರೊದ್ರಿಂದ ಅನ್ನೊ ಮಾತು ಸಹಜವಾಗೇ ಚರ್ಚೆಯಲ್ಲಿತ್ತು. ಆದರೆ ಪಟ್ಟನಾಯಕನಹಳ್ಳಿ ಪೊಲೀಸರು ಎಂಟ್ರಿ ಕೊಟ್ಟು ಮೃತದೇಹ ನೋಡುತಿದ್ದಂತೆ ಅಲ್ಲೊಂದು ಅನುಮಾನ ಮೂಡಿತ್ತು. ಇದು ವಯೋಸಹಜ ಸಾವು ಅಲ್ಲ. ಬದಲಿಗೆ ಕೊಲೆ ಎಂದು.
ಊರಿನ ಜನರು ಹೇಳೊ ಪ್ರಕಾರ ಈ ಶ್ರೀಧರನಿಗೆ ಹುಡುಗಿರ ಸಹವಾಸವಿತ್ತಂತೆ. ವೇಶ್ಯವಾಟಿಕೆಯಲ್ಲಿ ತೊಡಗಿರೊರ ಜೊತೆ ಸಂಪರ್ಕವಿತ್ತಂತೆ.. ಯಾವಾಗಲು ಫೋನ್ ನಲ್ಲಿ ಅವರ ಜೊತೆ ಮಾತನಾಡುತಿದ್ದನಂತೆ.. ಕುಡಿತದ ಚಟ.. ಜೂಜಾಟದ ಹುಚ್ಚು, ಇದರ ಜೊತೆಗೆ ವೇಶ್ಯೆಯರ ಸಂಪರ್ಕ ಶ್ರೀಧರಿನಿಗೆ ಹಣದ ಮೇಲೆ ಆಸೆ ಮೂಡಿಸಿತ್ತು.. ಇದಕ್ಕಾಗಿ ಪರಿತಪ್ಪಿಸಿದ ಶ್ರೀಧರ್ ಗೆ ಕಂಡಿದ್ದು, ವೃದ್ಧೆಯ ಕೊರಳಲಿದ್ದ ಎರಡೆಳೆ ಚಿನ್ನದ ಸರ.

