ಮೋಹರಂ: ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಕಿ ಕುಳಿತ ಯುವಕ, ವಿಡಿಯೋ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 15, 2024 | 5:10 PM

ಎಲ್ಲೆಡೆ ಮೊಹರಂ ಹಬ್ಬ ಸಂಭ್ರಮ ಮನೆ ಮಾಡಿದೆ. ಕೆಲವೆಡೆ ಹಿಂದೂ ಮುಸ್ಲಿಂ ಸೇರಿಕೊಂಡೇ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಹಬ್ಬ ಆಚರಣೆ ವೇಳೆ ವಿವಿಧ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾರೆ. ಅಲ್ಲದೇ ಕೆಲವರು ಹರಕೆ ಕಟ್ಟಿಕೊಂಡು ಕೆಂಡ ಹಾಯುತ್ತಾರೆ. ಅದರಂತೆ ವಿಜಯಪುರದಲ್ಲಿ ಯುವಕನೋರ್ವ ನಿಗಿ ನಿಗಿ ಕೆಂಡದಲ್ಲಿ ಕಂಬಳಿ ಹಾಸಿಕೊಂಡು ಪ್ರಾರ್ಥಿಸಿ ಹರಕೆ ತೀರಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ವಿಜಯಪುರ (,ಜುಲೈ 15): ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬವೆನ್ನಬಹುದು. ಈ ದಿನದಂದು ಇಮಾಮ್ ಹುಸೇನ್ ರ ತ್ಯಾಗವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ತಮ್ಮ ಹಿರಿಯರ ತ್ಯಾಗ-ಹೋರಾಟಗಳನ್ನು ನೆನೆಯುವ ಉದ್ದೇಶದಿಂದ ಈ ಹಬ್ಬವು ಮಹತ್ವದ್ದಾಗಿದೆ. ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದ್ದು, ಈ ಹಬ್ಬದಲ್ಲಿ ಹಲವರು ಹಲವು ರೀತಿಯಲ್ಲಿ ಹರಿಕೆ ತೀರಿಸುತ್ತಾರೆ. ಅದರಂತೆ ವಿಜಯಪುರ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ಯುವಕನೋರ್ವ ನಿಗಿ ನಿಗಿ ಕೆಂಡದಲ್ಲಿ ಕಂಬಳಿ ಹಾಸಿಕೊಂಡು ಪ್ರಾರ್ಥಿಸಿದ್ದಾನೆ.

ಹೌದು…ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ಮೊಹರಮ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕೆಂಡ ಹಾಯುವ ಹರಕೆ ಕಟ್ಟಿರುತ್ತಾರೆ. ಅದರಲ್ಲೂ ಈ ಗ್ರಾಮದ ಯುವಕ ಯಲ್ಲಪ್ಪ, ಮೊಹರಂ ಹಬ್ಬದ ಗಂಧ ಅಚರಣೆಗಾಗಿ ಹಾಕಿದ್ದ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಕಿ ನಮಸ್ಕಾರ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾನೆ ಕೆಂಡದ ಮೇಲೆ ಕಂಬಳಿ ಹಾಕಿ ನಮಸ್ಕಾರ ಮಾಡಿ ಮೇಲೆದ್ದರೂ ಸಹ ಯಲ್ಲಪ್ಪನಿಗೆ ಯಾವುದೇ ಗಾಯಗಳಾಗಿಲ್ಲ, ಇದನ್ನು ಗ್ರಾಮಸ್ಥರು ಅಲಾಯಿ ದೇವರ ಪವಾಡ ಎಂದು ನಂಬಿದ್ದು, ಪ್ರತಿ ವರ್ಷ ಇಂಥ ವಿಚಿತ್ರ ಹರಕೆ ತೀರಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on