Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ವಿಧಾನಪರಿಷತ್​ ಮುಂಗಾರು ಅಧಿವೇಶನದ ನೇರ ಪ್ರಸಾರ

Karnataka Assembly Session: ವಿಧಾನಪರಿಷತ್​ ಮುಂಗಾರು ಅಧಿವೇಶನದ ನೇರ ಪ್ರಸಾರ

ರಮೇಶ್ ಬಿ. ಜವಳಗೇರಾ
|

Updated on: Jul 15, 2024 | 3:52 PM

ಇಂದಿನಿಂದ ಕರ್ನಾಟಕ ಮುಂಗಾದು ಅಧಿವೇಶನ ಆರಂಭವಾಗಿದೆ. ಇಂದು (ಜುಲೈ 15) ಮೊದಲ ದಿನ ಆರಂಬದಲ್ಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಇನ್ನು ವಿಧಾನಸಭೆಯ ಮತ್ತು ವಿಧಾನಪರಿಷತ್​ ಕಲಾಪ ಶುರುವಾಗಿದ್ದು, ಕಲಾಪದಲ್ಲಿ ಏನೆಲ್ಲಾ ಹೇಗೆ ಚರ್ಚೆಗಳು ನಡೆಯುತ್ತಿವೆ ಎನ್ನುವುದನ್ನು ನೇರಪ್ರಸಾರದಲ್ಲಿ ವೀಕ್ಷಣೆ ಮಾಡಬಹುದು. ವಿಧಾನಪರಿಷತ್​​ ಕಲಾಪದ ಲೈವ್​ ಇಲ್ಲಿದೆ ನೋಡಿ.

ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಇಂದಿನಿಂದ (ಜುಲೈ 15) ಆರಂಭವಾಗಿದ್ದು, ವಿಧಾನಪರಿಷತ್ ಹಾಗೂ ವಿಧಾನಸಭೆ ಕಲಾಪ ಒಟ್ಟು ಒಂಬತ್ತು ದಿನ ನಡೆಯಲಿದೆ. ಮೊದಲ ದಿನ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಇನ್ನು ನಾಳೆಯಿಂದ ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮುಡಾ ಹಗರಣ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಬೆಲೆ ಏರಿಕೆ (Price Hike) ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸರ್ಕಾರದ ವಿರುದ್ಧ ಮುಗಿಬೀಳಲಿದೆ. ಸಿದ್ದರಾಮಯ್ಯ ಸರ್ಕಾರ ಕೂಡ ನಿನ್ನೆ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯುತ್ತರ ನೀಡಲು ಸೂಕ್ತ ಸಿದ್ಧತೆ ಮಾಡಿಕೊಂಡಿದೆ. ವಿಧಾನ ಪರಿಷತ್‌ ಕಲಾಪದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ನೇರಪ್ರಸಾರ ಇಲ್ಲಿದೆ ನೋಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ