ಕಾವಿ ಧರಿಸಿ ರಾಜಕೀಯಕ್ಕೆ ಬಂದರೆ ಅದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಥರ ಎಡಬಿಡಂಗಿತನ ಆಗುತ್ತದೆ: ಮುಖ್ಯಮಂತ್ರಿ ಚಂದ್ರು, ಆಪ್ ಮುಖಂಡ

ಕಾವಿ ಧರಿಸಿ ರಾಜಕೀಯಕ್ಕೆ ಬಂದರೆ ಅದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಥರ ಎಡಬಿಡಂಗಿತನ ಆಗುತ್ತದೆ: ಮುಖ್ಯಮಂತ್ರಿ ಚಂದ್ರು, ಆಪ್ ಮುಖಂಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 25, 2023 | 6:03 PM

ಕಾವಿ ಧರಿಸಿ ಬಂದರೆ ಅದು ಸಿದ್ಧಾಂತಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದ ಅವರು ಕಾವಿತೊಟ್ಟು ರಾಜಕೀಯಕ್ಕೆ ಬಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಎಡಬಿಡಂಗಿ ಅಂತ ಕರೆದರು.

ಗದಗ: ವಿಚಾರವಾದಿ, ಸಿನಿಮಾ ನಟ, ರಂಗಭೂಮಿ ಕಲಾವಿದ ಮತ್ತು ರಾಜಕಾರಣಿಯೂ ಆಗಿರುವ ಮುಖ್ಯಮಂತ್ರಿ ಚಂದ್ರು (Mukhyamantri Chandru) ಅವರು ನೇರ ಮಾತಿಗಾರಿಕೆಗೆ ಖ್ಯಾತಿವಂತರು. ಈಗ ಅವರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತ. ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಚಂದ್ರು ಅವರು ಮಠಾಧೀಶರು ರಾಜಕಾರಣದಲ್ಲಿ ಮೂಗು ತೂರಿಸುವುದನ್ನು ತೀವ್ರವಾಗಿ ಖಂಡಿಸಿದರು. ಅವರು ರಾಜಕಾರಣಕ್ಕೆ ಬರುವುದೇ ಅದರೆ, ಮೈಮೇಲಿನ ಕಾವಿಯನ್ನು ತೆಗೆದು ಬರಲಿ, ಕಾವಿ ಧರಿಸಿ ಬಂದರೆ ಅದು ಸಿದ್ಧಾಂತಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದ ಅವರು ಕಾವಿತೊಟ್ಟು ರಾಜಕೀಯಕ್ಕೆ ಬಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಎಡಬಿಡಂಗಿ ಅಂತ ಕರೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ