Gujarat Plane Crash: ಉಕ್ಕಿನ ಹಕ್ಕಿಗೆ ಪೆಟ್ಟು ಬೀಳ್ತೈತಪ್ಪ ಅಂತ ಕಾಲಜ್ಞಾನ ನುಡಿದಿದ್ದ ಬೆಳಗಾವಿ ಸ್ವಾಮೀಜಿ

Updated on: Jun 13, 2025 | 1:23 PM

ಬೆಳಗಾವಿ ನಗರದಲ್ಲಿ ಪ್ರತಿವರ್ಷ ಸುಖದೇವಾನಂದ ಮಠದ ಜಾತ್ರೆ ನಡೆಯುತ್ತದೆ ಮತ್ತು ಸಹಸ್ರಾರು ಜನ ಅದರಲ್ಲಿ ಭಾಗವಹಿಸುತ್ತಾರೆ. ಅಭಿನವ ಸಿದ್ಧಲಿಂಗ ಸ್ವಾಮೀಜಿಯವರು ಜಾತ್ರೆ ನಡೆಯುತ್ತಿದ್ದಾಗ ಬೆಂಕಿ ಕೆಂಡದ ಮೇಲೆ ನಡೆದು ಕಾಲಜ್ಞಾನ ನುಡಿದಿದ್ದರು. ಅವರು ನುಡಿದ ಭವಿಷ್ಯ ಹೆಚ್ಚು ಕಡಿಮೆ ಎರಡು ತಿಂಗಳ ಅವಧಿಯಲ್ಲಿ ನಿಜವಾಗಿದೆ.

ಅಹಮದಾಬಾದ್, ಜೂನ್ 13: ನಿನ್ನೆ ನಡೆದ ವಿಮಾನ ದುರಂತ (plane crash) ಭಾರತವನ್ನು ತತ್ತರಿಸುವಂತೆ ಮಾಡಿದೆ. ದೇಶದಲ್ಲಿ ವಿಮಾನ ದುರಂತ ಸಂಭವಿಸಲಿದೆ ಎಂದು ಸ್ವಾಮೀಜಿಯೊಬ್ಬರು ಕಾಲಜ್ಞಾನ, ಭವಿಷ್ಯ ನುಡಿದಿದ್ದರು ಎಂದರೆ ನೀವು ನಂಬ್ತೀರಾ? ಈ ವಿಡಿಯೋದಲ್ಲಿದೆ ಅದಕ್ಕೆ ಪುರಾವೆ. ಬೆಳಗಾವಿಯ ನಯಾನಗರದಲ್ಲಿರುವ ಸುಖದೇವಾನಂದ ಸ್ವಾಮೀಜಿ ಮಠದ ಸ್ವಾಮೀಜಿ ಅಭಿನವ ಸಿದ್ಧಲಿಂಗ ಸ್ವಾಮೀಜಿಯವರು, ಬೆಂಕಿ ಪ್ರಬಲವಾಗಿರುತ್ತದೆ, ಊರೇ ನಡುಗುಹೋಗಲಿದೆ, ಉಕ್ಕಿನ ಹಕ್ಕಿಗೆ ಪೆಟ್ಟು ಬೀಳಲಿದೆ ಎಂದು ಅವರು ಏಪ್ರಿಲ್ 20ರಂದು ನಡೆದ ಜಾತ್ರೆಯಲ್ಲಿ ಭವಿಷ್ಯವಾಣಿ ನುಡಿದಿದ್ದರು. ಅವರು ಹೇಳೋದನ್ನು ಕೇಳಿಸಿಕೊಳ್ಳಬಹುದು.

ಇದನ್ನೂ ಓದಿ:  Gujarat Plane Crash: ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More