ಅಂಬರೀಷ್ ಪುಣ್ಯಸ್ಮರಣೆ: ಸಮಾಧಿ ಎದುರು ಅಮ್ಮನ ತಬ್ಬಿದ ಅಭಿಷೇಕ್
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸಮಾಧಿಗೆ ಸುಮಲತಾ, ಅಭಿಷೇಕ್ ಅಂಬರೀಷ್, ರಾಕ್ಲೈನ್ ವೆಂಕಟೇಶ್ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಯನ್ನು ನೆನದು ಅಮ್ಮನ ತಬ್ಬಿದ್ದಾರೆ ಅಭಿಷೇಕ್.
ಇಂದು (ನವೆಂಬರ್ 24) ಅಂಬರೀಷ್ (Ambareesh) ಅವರ ಐದನೇ ವರ್ಷ ಪುಣ್ಯಸ್ಮರಣೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸಮಾಧಿಗೆ ಸುಮಲತಾ, ಅಭಿಷೇಕ್ ಅಂಬರೀಷ್, ರಾಕ್ಲೈನ್ ವೆಂಕಟೇಶ್ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಯನ್ನು ನೆನದು ಅಮ್ಮನ ತಬ್ಬಿದ್ದಾರೆ ಅಭಿಷೇಕ್. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ‘ಅಂಬಿ ನಮ್ಮ ಜೊತೆ ಇರಬೇಕಿತ್ತು’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಂಬರೀಷ್ ಪುಣ್ಯಸ್ಮರಣೆಯ ದಿನದಂದೇ ಅಭಿಷೇಕ್ ಅವರ ಹೊಸ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ರಿಲೀಸ್ ಆಗಿದೆ ಅನ್ನೋದು ವಿಶೇಷ. ‘ದುನಿಯಾ’ ಸೂರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: