ಹುಟ್ಟುಹಬ್ಬದಂದು ಪತ್ನಿಯೊಂದಿಗೆ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ ಅಭಿಷೇಕ್: ವಿಡಿಯೋ
ಅಭಿ-ಅವಿವಾ

ಹುಟ್ಟುಹಬ್ಬದಂದು ಪತ್ನಿಯೊಂದಿಗೆ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ ಅಭಿಷೇಕ್: ವಿಡಿಯೋ

|

Updated on: Oct 03, 2023 | 11:02 PM

Abhishek Ambareesh: ನಟ ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬವಾದ ಇಂದು (ಅಕ್ಟೋಬರ್ 03) ಪತ್ನಿ ಅವಿವಾ ಜೊತೆ ಸೇರಿ ತಂದೆ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇಂದು (ಅಕ್ಟೋಬರ್ 3) ಅಭಿಷೇಕ್ ಅಂಬರೀಶ್ (Abhishek Ambareesh) ಹುಟ್ಟುಹಬ್ಬ. ಕಾವೇರಿ ಕಲಹ ನಡೆಯುತ್ತಿರುವ ಕಾರಣ ಅಭಿಷೇಕ್ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಸಹ ಕೆಲವು ಅಭಿಮಾನಿಗಳು ಮನೆಯ ಬಳಿ ಬಂದು ಅಭಿಷೇಕ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಅಭಿಮಾನಿಗಳೊಟ್ಟಿಗೆ ಫೋಟೊಕ್ಕೆ ನಗು ಬೀರಿದ ಅಭಿಷೇಕ್. ಸಂಜೆ ವೇಳೆಗೆ ಪತ್ನಿ ಅವಿವಾ ಒಟ್ಟಿಗೆ ತಂದೆ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದು, ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಹ ಸಲ್ಲಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ