ಬೆಳಗಾವಿ: ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ (Belagavi Rural) ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಸೋತಿದ್ದ ಬಿಜೆಪಿ ನಾಯಕ ಸಂಜಯ ಪಾಟೀಲ್ (Sanjay Patil) ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡಸಿ ಶಾಸಕಿಯ ವಿರುದ್ಧ ತೀವ್ರ ಗದಾಪ್ರಹಾರ ನಡೆಸಿದರು. ಹೆಬ್ಬಾಳ್ಕರ್ ವಿರುದ್ಧ ಪಾಟೀಲ್ ಮಾಡಿದ ಗುರುತರವಾದ ಅರೋಪಗಳಲ್ಲಿ ಒಂದೆಂದರೆ ಸುಮಾರು 20-30 ವರ್ಷಗಳ ಹಿಂದೆ ಶಾಸಕಿ ತನ್ನ ಕಚೇರಿಗೆ ಬಂದು 50,000 ರೂಪಾಯಿ ಕೈಸಾಲ ತೆಗೆದುಕೊಂಡು ಹೋಗಿ ವಾಪಸ್ಸು ಕೊಡದಿರುವುದು. ಅಂದು ಕೇವಲ 50,000 ರೂಪಾಯಿ ತನ್ನಿಂದ ತೆಗೆದುಕೊಂಡ ಹೋದ ಹೆಬ್ಬಾಳ್ಕರ್ ಇಂದು 500 ಕೋಟಿ ರೂ. ಮಾಲೀಕರಾಗಿದ್ದು ಹೇಗೆ ಅಂತ ಪಾಟೀಲ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ