ಗೃಹಸಚಿವರ ನಿವಾಸದ ಮುಂದೆ ಪ್ರತಿಭಟನೆಗಿಳಿದ ಎಬಿವಿಪಿ ಕಾರ್ಯಕರ್ತರನ್ನು ಪೋಲಿಸರು ಬಲವಂತದಿಂದ ಹೊರಹಾಕಿದರು
ಎಬಿವಿಬಿ ಸಂಘಟನೆ ಕಾರ್ಯಕರ್ತರು ರಾಜ್ಯದಲ್ಲಿ ದ್ವೇಷದ ಕೊಲೆಗಳು ಹೆಚ್ಚುತ್ತಿವೆ, ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದ ಗೇಟ್ ತಳ್ಳಿ ಒಳನುಗ್ಗಿದರು.
ಬೆಂಗಳೂರು: ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಸಂಸದ ತೇಜಸ್ವೀ ಸೂರ್ಯ (Tejasvi Surya) ಮನೆಗೆ ಮುತ್ತಿಗೆ ಹಾಕಿದರೆ ಮತ್ತೊಂದೆಡೆ ಎಬಿವಿಬಿ (ABVP) ಸಂಘಟನೆ ಕಾರ್ಯಕರ್ತರು ರಾಜ್ಯದಲ್ಲಿ ದ್ವೇಷದ ಕೊಲೆಗಳು ಹೆಚ್ಚುತ್ತಿವೆ, ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ನಿವಾಸದ ಗೇಟ್ ತಳ್ಳಿ ಒಳನುಗ್ಗಿದರು. ಪೊಲೀಸರೊಂದಿಗೆ ಮಾತಿನ ಚಕಮಕಿಯಲ್ಲೂ ಅವರು ತೊಡಗಿದರು. ಸ್ವಲ್ಪ ಸಮಯದ ಬಳಿಕ ಪೊಲೀಸರು ಕಾರ್ಯಕರ್ತರನ್ನು ಬಲವಂತದಿಂದ ಹೊರಹಾಕಿದರು.