ಬೇರೆಯವರಿಂದ ನಿರೀಕ್ಷಿಸುವ ಬದಲು ನಮಗಿರುವುದರಲ್ಲೇ ಸಂತೃಪ್ತಿಪಟ್ಟುಕೊಳ್ಳಬೇಕು: ಡಾ ಸೌಜನ್ಯ ವಶಿಷ್ಠ

|

Updated on: Jun 16, 2022 | 11:51 AM

ಬೇರೆಯವರ ಮೇಲೆ ನಿರೀಕ್ಷೆ ಇಟ್ಟುಕೊಂಡು ಅದಾಗಿದ್ದರೆ ಬದುಕು ನೆಟ್ಟಗಾಗುತ್ತದೆ ಅಂದುಕೊಂಡು ಅದು ಆಗದೇ ಹೋದಾಗ ಹಪಹಪಿಸುವುದಕ್ಕಿಂತ ನಮಗಿರುವುದಲ್ಲಿ, ನಾವಿರುವುದುರಲ್ಲಿ ಸಂತೃಪ್ತಿ ಪಟ್ಟುಕೊಳ್ಳುವುದರಲ್ಲೇ ಬದುಕಿನ ಸಾರ್ಥಕತೆ ಅಡಗಿದೆ.

Bengaluru: ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ (Dr Soujanya Vasishtha) ಅವರು ಬದುಕಿನಲ್ಲಿ ವೃಥಾ ನಿರೀಕ್ಷೆಗಳನ್ನು ಇಟ್ಟುಕೊಂಡು ಅವು ನೆರವೇರದೆ ಹೋದಾಗ ಅನುಭವಿಸುವ ನಿರಾಶೆ ಬಗ್ಗೆ ಮಾತಾಡಿದ್ದಾರೆ. ನಮ್ಮ ಎಲ್ಲ ಧರ್ಮಶಾಸ್ತ್ರಗಳಲ್ಲಿ (Holy Books) ಇಲ್ಲದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು ಎಂಬ ಬೋಧನೆ ಸಿಗುತ್ತದೆ. ಹಾಗಾಗಿ ನಿರೀಕ್ಷೆಗಿಂತ ಸ್ವೀಕೃತಿ (acceptance) ಮೇಲೆ ಆತುಕೊಳ್ಳುವುದು ಸಮಂಜಸ ಅಂತ ಸೌಜನ್ಯ ಹೇಳುತ್ತಾರೆ. ಸ್ವೀಕೃತಿ ಅಂದರೆ ನಮ್ಮನ್ನು ನಾವಿರುವ ಹಾಗೆ ಅಂಗೀಕರಿಸಿಕೊಳ್ಳುವುದು. ಬೇರೆಯವರ ಮೇಲೆ ನಿರೀಕ್ಷೆ ಇಟ್ಟುಕೊಂಡು ಅದಾಗಿದ್ದರೆ ಬದುಕು ನೆಟ್ಟಗಾಗುತ್ತದೆ ಅಂದುಕೊಂಡು ಅದು ಆಗದೇ ಹೋದಾಗ ಹಪಹಪಿಸುವುದಕ್ಕಿಂತ ನಮಗಿರುವುದಲ್ಲಿ, ನಾವಿರುವುದುರಲ್ಲಿ ಸಂತೃಪ್ತಿ ಪಟ್ಟುಕೊಳ್ಳುವುದರಲ್ಲೇ ಬದುಕಿನ ಸಾರ್ಥಕತೆ ಅಡಗಿದೆ ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 16, 2022 11:25 AM