ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಲಿದೆ ಅನ್ನೋದಿಕ್ಕೆ ನನ್ನ ಗೆಲುವು ಸಾಕ್ಷಿಯಾಗಿದೆ: ಮಧು ಮಾದೇಗೌಡ
ಹಾಗೆಯೇ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ಪತಾಕೆ ಹಾರಿಸಲಿದೆ ಅನ್ನೋದಕ್ಕೆ ತಮ್ಮ ಗೆಲುವು ಮುನ್ಸೂಚನೆಯಾಗಿದೆ ಎಂದು ಮಧು ಮಾದೇಗೌಡ
Mysuru: ದಕ್ಷಿಣ ಪದವೀಧರರ ಕ್ಷೆತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ಮಧು ಮಾದೇಗೌಡ (Madhu Madegowda) ಅವರು ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್ ಅವರೊಂದಿಗೆ ಮಾತಾಡುತ್ತ್ತಾ ತಮ್ಮ ಗೆಲುವಿಗೆ ಅವರ ತಂದೆ ಚಿಕ್ಕ ಮಾದೇಗೌಡ (Chikka Madegowda), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಪ್ರಮುಖ ಕಾರಣ ಎಂದು ಹೇಳುತ್ತಾರೆ. ಬಿಜೆಪಿ ಪಕ್ಷದಲ್ಲಿ ನಡೆದಿರುವ ಒಳಜಗಳಗಳಿಗಿಂತ ಸರ್ಕಾರದ ದುರಾಡಳಿತ ಮತ್ತು ಜೆಡಿ(ಎಸ್) ಪಕ್ಷದಲ್ಲಿ ತಲೆದೋರಿರುವ ಬಂಡಾಯವೇ ತಮ್ಮ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು ಎಂದು ಹೇಳುವ ಮಾದೇಗೌಡರು, ಜೆಡಿಎಸ್ ಪಕ್ಷದ ಮರಿತಿಬ್ಬೇಗೌಡರು ಕಾಂಗ್ರೆಸ್ ಪರ ಕೆಲಸ ಮಾಡಿದರು ಎಂದು ಹೇಳಿದರು. ಹಾಗೆಯೇ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ಪತಾಕೆ ಹಾರಿಸಲಿದೆ ಅನ್ನೋದಕ್ಕೆ ತಮ್ಮ ಗೆಲುವು ಮುನ್ಸೂಚನೆಯಾಗಿದೆ ಎಂದು ಮಧು ಮಾದೇಗೌಡ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.