ಬೆಳಗಾವಿ: ಆಕಸ್ಮಿಕ ಬೆಂಕಿ, ಏಕಕಾಲಕ್ಕೆ ಹೊತ್ತಿ ಉರಿದ ನಾಲ್ಕು ವಾಹನಗಳು; ವಿಡಿಯೋ ವೈರಲ್
ನಗರದ ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ಟಾಟಾ ಓಮಿನಿ, ಟಾಟಾ ಏಸ್ ಸೇರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿದೆ.
ಬೆಳಗಾವಿ: ನಗರದ ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ಟಾಟಾ ಓಮಿನಿ, ಟಾಟಾ ಏಸ್ ಸೇರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿದೆ. ಹೌದು ಮೊದಲು ಆಕಸ್ಮಿಕವಾಗಿ ಒಂದು ವಾಹನಕ್ಕೆ ಬೆಂಕಿ ತಗುಲಿದ್ದು, ಬಳಿಕ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬೆಂಕಿ ವ್ಯಾಪಿಸಿದ ಪರಿಣಾಮ ನಾಲ್ಕು ವಾಹನಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ