AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಎಸ್​ಆರ್ ಶ್ರೀನಿವಾಸ್​ಗೆ ಸಚಿವ ಸ್ಥಾನ ಸಿಗಲೆಂದು ಮಂಜುನಾಥನಿಗೆ ಸಾಮೂಹಿಕ ಮುಡಿ ನೀಡಿದ ಅಭಿಮಾನಿಗಳು

ಶಾಸಕ ಎಸ್​ಆರ್ ಶ್ರೀನಿವಾಸ್​ಗೆ ಸಚಿವ ಸ್ಥಾನ ಸಿಗಲೆಂದು ಮಂಜುನಾಥನಿಗೆ ಸಾಮೂಹಿಕ ಮುಡಿ ನೀಡಿದ ಅಭಿಮಾನಿಗಳು

ಗಂಗಾಧರ​ ಬ. ಸಾಬೋಜಿ
|

Updated on: May 19, 2023 | 3:53 PM

Share

ಗುಬ್ಬಿ ಶಾಸಕ ಎಸ್​ಆರ್ ಶ್ರೀನಿವಾಸ್​ಗೆ ಸಚಿವ ಸ್ಥಾನ ಕೊಡುವಂತೆ ಗುಬ್ಬಿ ವಾಸಣ್ಣ ಅಭಿಮಾನಿ ಬಳಗದವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ.

ತುಮಕೂರು: ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ಮೇ. 20ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ​ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಂಬಂಧ ಶಾಸಕರ ಲಾಬಿ ಜೋರಾಗಿಯೇ ನಡೆಯುತ್ತದೆ. ಇದರ ಮಧ್ಯೆ ಸಂಪುಟದಲ್ಲಿ ಸ್ಥಾನ ಪಡೆಯಲು ವಿವಿಧ ರೀತಿಯಲ್ಲಿ ಶಾಸಕರು ಯತ್ನಿಸುತ್ತಿದ್ದಾರೆ. ಗುಬ್ಬಿ ಶಾಸಕ ಎಸ್​ಆರ್ ಶ್ರೀನಿವಾಸ್​ಗೆ ಸಚಿವ ಸ್ಥಾನ ನೀಡಲಿ ಗುಬ್ಬಿ ವಾಸಣ್ಣ ಅಭಿಮಾನಿ ಬಳಗದವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ. ಜೊತೆಗೆ ದೇವರಿಗೆ ಉರುಳು ಸೇವೆ ಮಾಡಿ, ಮುಡಿ ಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More