Yatnal’ s Faux pas: ಭಾರತದ ಮೊದಲ ಪ್ರಧಾನ ಮಂತ್ರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆಗಬೇಕಿತ್ತೇ? ಬಸನಗೌಡ ಯತ್ನಾಳ್ ಪ್ರಕಾರ ಹೌದು!
ಎಲ್ಲ ಉಚಿತ ಎಲ್ಲರಿಗೂ ಉಚಿತ ಅಂತ ಜನರಿಗೆ ಸುಳ್ಳು ಹೇಳಿ ಮೋಸದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೇಳುವಾಗ ಯತ್ನಾಳ್ ಸಿದ್ದರಾಮಯ್ಯ ಮಾತಾಡಿದ ಶೈಲಿಯನ್ನುಅಣುಕಿಸಿದರು.
ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿನಿಂದಲೂ ಮೋಸ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಂಚನೆಯ ಮತ್ತೊಂದು ಪ್ರಯೋಗ ಆರಂಭಿಸಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ಫ್ರೀಡಂ ಪಾರ್ಕ್ ನಲ್ಲಿ (Freedom Park) ಬಿಜೆಪಿ ನಾಯಕರು ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತಾಡಿದ ಯತ್ನಾಳ್ ಈ ಸರ್ಕಾರ ಎಲ್ಲ ಉಚಿತ ಎಲ್ಲರಿಗೂ ಉಚಿತ ಅಂತ ಜನರಿಗೆ ಸುಳ್ಳು ಹೇಳಿ ಮೋಸದಿಂದ ಅಧಿಕಾರಕ್ಕೆ ಬಂದಿದೆ ಎಂದು ಹೇಳುವಾಗ ಸಿದ್ದರಾಮಯ್ಯ ಮಾತಾಡಿದ ಶೈಲಿಯನ್ನು ಅಣುಕಿಸಿದರು. ಅದೆಲ್ಲ ಸರಿ, ಅವರು ಹೇಳಿದ ಒಂದು ಮಾತ್ರ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಭಾರತಕ್ಕೆ ಸ್ವಾತಂತ್ಯ ಸಿಕ್ಕಿದ್ದು 1947ರಲ್ಲಿ, ಅಧಿಕೃತ ಮೂಲಗಳ ಪ್ರಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ (Subhas Chandra Bose) ಮರಣಿಸಿದ್ದು 1945ರಲ್ಲಿ, ಅಂದರೆ ಸ್ವಾತಂತ್ರ್ಯ ಸಿಗುವದಕ್ಕಿಂತ ಎರಡು ವರ್ಷ ಮೊದಲು! ಆದರೆ ಯತ್ನಾಳ್ ಅವರು ನೇತಾಜಿ ಭಾರತದ ಮೊದಲ ಪ್ರಧಾನ ಮಂತ್ರಿ ಆಗಬೇಕಿತ್ತು ಮೋಸದಿಂದ ಅವರ ಬದಲು ಬೇರೆಯವರು ಆದರು ಎನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ