ಸಾವರ್ಕರ್​ರನ್ನು ವಿರೋಧಿಸುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಸಾವರ್ಕರ್​ ಅವರನ್ನು ವಿರೋಧಿಸಿ ಮಾತಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸಾವರ್ಕರ್​ರನ್ನು ವಿರೋಧಿಸುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 21, 2022 | 10:42 PM

ವಿಜಯಪುರ: ಸಾವರ್ಕರ್​ (Savarkar) ಅವರನ್ನು ವಿರೋಧಿಸಿ ಮಾತಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲ ಎಂದು ವಿಜಯಪುರದಲ್ಲಿ (Vijayapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal)  ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ವೀರ ಸಾವರ್ಕರ ವೇದಿಕೆಯಲ್ಲಿ ಶ್ರೀ ಗಜಾನನ ಮಹಾಮಂಡಳ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಗಣೇಶೋತ್ಸವ ಮಂಡಳಿಗಳು ಹಾಗೂ ಆಧಿಕಾರಿಗಳು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಅವರು ಸಾವರ್ಕರ್​ ತಪಸ್ಸಿನ ಬಗ್ಗೆ ಮಾತಾಡುತ್ತೀರಾ ? ಎತ್ತಿನ ಬದಲಾಗಿ ಸಾವರ್ಕರ್ ಅವರನ್ನು ಕಟ್ಟಿ ಗಾಣ ತೆಗೆಯುತ್ತಿದ್ದರು. ಅಂಥ ಜಾಗದಲ್ಲಿ ಕುಳಿತು ಸಾವರ್ಕರ್ ನೂರಾರು ಪುಸ್ತಕ ಬರೆದರು. ಅಂತಹ ಮಹಾನ್ ವ್ಯಕ್ತಿ ಬಗ್ಗೆ ಮಾತನಾಡುತ್ತೀರಿ ಎಂದು ವಾಗ್ದಾಳಿ ಮಾಡಿದರು.

ದೇಶದಲ್ಲಿನ ಸಾವರ್ಕರ ವಿರೋಧವಾಗಿ ಮಾತನಾಡುವವರು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಇಟ್ಟಿದ್ದ ಜಾಗದಲ್ಲಿ ಒಂದು ವಾರ ಕಾಲಾಪಾನಿ ಶಿಕ್ಷೆಗೆ ಒಳಗಾಗಿ ಸಾವರ್ಕರ್ ಇದ್ದ ರೂಂನಲ್ಲಿರಬೇಕು. ಅಪ್ಪಗ ಹುಟ್ಟಿದ್ದರೆ ಒಂದು ವಾರ ಅಲ್ಲಿರಬೇಕೆಂದು ಸವಾಲು ಹಾಕಿದರು.

ಎತ್ತಿನ ಬದಲಾಗಿ ಸಾವರ್ಕರ ಅವರನ್ನು ಕಟ್ಟಿ ಗಾಣ ತೆಗೆಯುತ್ತಿದ್ದರು. ಹಿಂದೆ ಚಾಬೂಕ್ ನಿಂದ ಹೊಡೆಯುತ್ತಿದ್ದರು, ಇಂಥದ್ದನ್ನು ಯಾರು ತಾಳುತ್ತಾರೆ ? ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿ ಬಳಿ ಸಾವರ್ಕರ್ ಫೋಟೋ ಇಡಿ. ನಾವು ಜಿಲ್ಲೆಯಾದ್ಯಂತ ಎಲ್ಲರಿಗೂ ಸಾವರ್ಕರ್‌ ಫೋಟೋ ನೀಡುತ್ತೇವೆ. ತಮ್ಮ ಇಡೀ ಜೀವನವನ್ನ ಭಾರತ ಮಾತೆಗೆ ಸಾವರ್ಕರ್‌ ಅರ್ಪಿಸಿದ್ದರು. ಹೀಗಾಗಿ ಸಾವರ್ಕರ್‌ರನ್ನು ನಾವು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವ ಆದೇಶ ಹಿನ್ನಲೆಯ ವಿಚಾರವಾಗಿ ಮಾತನಾಡಿದ ಅವರು ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣಪತಿಗೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ ಎಂದು ಹೇಳಿದ್ದಾರೆ.

Published On - 10:40 pm, Sun, 21 August 22