ಬೀಳಗಿ ರೈತರ ಜಕನೇರನ ಕಟ್ಟೆ ಭವಿಷ್ಯದ ಪ್ರಕಾರ ಈ ವರ್ಷ ಸಕಾಲಕ್ಕೆ ಮಳೆ ಮತ್ತು ಸಮೃದ್ಧಿ, ಯಾವುದಕ್ಕೂ ಕೊರತೆ ಇಲ್ಲ!

|

Updated on: Apr 09, 2024 | 10:57 AM

ಮರುದಿನ ಅವರು ಬಂದು ಎಕ್ಕೆ ಎಲೆಗಳನ್ನು ಸರಸಿ ಅವುಗಳ ಕೆಳಗಿದ್ದ ಕಾಳುಗಳು ಹೀರಿಕೊಂಡಿರುವ ತೇವಾಂಶದ ಆಧಾರದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಚರಣಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ಖಚಿತವಾಗಿ ಹೇಳುತ್ತಾರೆ. ಅವರು ನುಡಿಯುವ ಭವಿಷ್ಯವಾಣಿಯನ್ನು ಬರೆದಿಟ್ಟುಕೊಂಡು ನಂತರ ಪ್ರಮಾಣೀಕರಿಸಬಹುದೆಂದು ವಿವರಣೆ ನೀಡುವ ವ್ಯಕ್ತಿ ಹೇಳುತ್ತಾರೆ

ಬಾಗಲಕೋಟೆ: ಹವಾಮಾನ ಇಲಾಖೆ (meteorological department) ನೀಡುವ ವರದಿಯನ್ನು ನಾವು ಪ್ರತಿದಿನ ಮಾಧ್ಯಮಗಳಲ್ಲಿ ನೋಡುತ್ತೇವೆ. ಇಲಾಖೆಯ ವಿಜ್ಞಾನಿಗಳು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಹವಾಮಾನ ಮುನಸ್ಸೂಚನೆ (weather forecast) ನೀಡುತ್ತಾರೆ. ಆದರೆ, ಬೀಳಗಿ ರೈತರು (Bilgi farmers) ಇಡೀ ವರ್ಷದ ಹವಾಮಾನ, ಮಳೆ-ಬೆಳೆ ಬಗ್ಗೆ ಮೊದಲೇ ತಿಳಿದುಕೊಳ್ಳಲು ತಮ್ಮದೇ ಆದ ‘ನಾಟಿ’ ವಿಧಾನವನ್ನು ಅನುಸರಿಸುತ್ತಾರೆ. ಸ್ಥಳೀಯರೊಬ್ಬರು ಈ ವಿಧಾನದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ರೈತರು ಒಂದ ಮಣ್ಣಿನ ಕಟ್ಟೆ ನಿರ್ಮಾಣ ಮಾಡಿ (ಇದನ್ನು ಅವರು ಜಕನೇರನ ಕಟ್ಟೆ (Jakaneranakatte) ಅನ್ನುತ್ತಾರೆ) ಅದರ ಮೇಲೆ 27 ಬಗೆಯ ಧಾನ್ಯಗಳನ್ನು ಇಟ್ಟು ಅವುಗಳ ಮೇಲೆ ಎಕ್ಕೆ ಎಲೆ ಹೊದಿಸುತ್ತಾರೆ. ಅದೇ ಕಟ್ಟೆಯ ಮೇಲೆ ಮಣ್ಣಿನಿಂದ ತಯಾರಿಸಿದ ಕೃಷಿ ಸಲಕರಣೆ ಮತ್ತು ಜನ ತಮ್ಮ ಉಪಜೀವನಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಇಡುತ್ತಾರೆ.

ಮರುದಿನ ಅವರು ಬಂದು ಎಕ್ಕೆ ಎಲೆಗಳನ್ನು ಸರಸಿ ಅವುಗಳ ಕೆಳಗಿದ್ದ ಕಾಳುಗಳು ಹೀರಿಕೊಂಡಿರುವ ತೇವಾಂಶದ ಆಧಾರದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಚರಣಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ಖಚಿತವಾಗಿ ಹೇಳುತ್ತಾರೆ. ಅವರು ನುಡಿಯುವ ಭವಿಷ್ಯವಾಣಿಯನ್ನು ಬರೆದಿಟ್ಟುಕೊಂಡು ನಂತರ ಪ್ರಮಾಣೀಕರಿಸಬಹುದೆಂದು ವಿವರಣೆ ನೀಡುವ ವ್ಯಕ್ತಿ ಹೇಳುತ್ತಾರೆ.

ಜಕನೇರನ ಕಟ್ಟೆ ಭವಿಷ್ಯದ ಪ್ರಕಾರ ಈ ವರ್ಷ ಸಕಾಲಕ್ಕೆ ಮತ್ತು ಸಮೃದ್ಧಿಯಾಗಿ ಮಳೆಯಾಗಲಿದೆ. ಮಣ್ಣಿನ ಕಟ್ಟೆಯಲ್ಲಿ ಬಿರುಕುಗಳು ಕಂಡಿರುವುದರಿಂದ ಅವು ಭೂಕಂಪ ಮುನ್ಸೂಚನೆ ಎಂದು ರೈತರು ಹೇಳುತ್ತಾರೆ. ಇದು ಪ್ರತಿ ಯುಗಾಗಿ ಹಬ್ಬದ ದಿನ ಬೀಳಗಿಯಲ್ಲಿ ನಡೆಯುವ ಪ್ರಕ್ರಿಯೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಪೊರ್ ಜಾಯ್ ಅಬ್ಬರ, ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್, ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ