Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮದ್ಯದ ಅಮಲಿನಲ್ಲಿ ಪಾರ್ಕ್​​​ ಬೆಂಚಿನ ಸಂಧಿಗೆ ತಲೆ ಹಾಕಿ ಪರದಾಡಿದ ಕುಡುಕ, ಮುಂದೇನಾಯ್ತು ನೋಡಿ?

Video: ಮದ್ಯದ ಅಮಲಿನಲ್ಲಿ ಪಾರ್ಕ್​​​ ಬೆಂಚಿನ ಸಂಧಿಗೆ ತಲೆ ಹಾಕಿ ಪರದಾಡಿದ ಕುಡುಕ, ಮುಂದೇನಾಯ್ತು ನೋಡಿ?

ಅಕ್ಷತಾ ವರ್ಕಾಡಿ
|

Updated on:Apr 09, 2024 | 12:20 PM

ಕಂಟಪೂರ್ತಿ ಕುಡಿದು ಪಾರ್ಕ್​​​ ಬೆಂಚ್​​ ಮೇಲೆ ಮಲಗಿದ್ದ ವ್ಯಕ್ತಿಯ ತಲೆ ಬೆಂಚಿನ ಸಂದಿಯ ನಡುವೆ ಸಿಲುಕಿಕೊಂಡಿದ್ದ ಘಟನೆ ಕಾನ್ಪುರದ ರಾಮಲೀಲಾ ಪಾರ್ಕ್‌ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ.

ಉತ್ತರ ಪ್ರದೇಶ:  ಕಂಟಪೂರ್ತಿ ಕುಡಿದು ಪಾರ್ಕ್​​​ ಬೆಂಚ್​​ ಮೇಲೆ ಮಲಗಿದ್ದ ವ್ಯಕ್ತಿಯ ತಲೆ ಬೆಂಚಿನ ಸಂದಿಯ ನಡುವೆ ಸಿಲುಕಿಕೊಂಡಿದ್ದ ಘಟನೆ ಕಾನ್ಪುರದ ರಾಮಲೀಲಾ ಪಾರ್ಕ್‌ ನಡೆದಿದೆ. ಭಾನುವಾರ (ಏಪ್ರಿಲ್ 7) ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಕುಡಿದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿ ಎಚ್ಚರಗೊಳ್ಳುವ ಹೊತ್ತಿಗೆ ಬೆಂಚಿನ ಅಂತರದ ನಡುವೆ ಸಿಲುಕಿ ಕೊಂಡಿರುವುದು ಗೊತ್ತಾಗಿದೆ.

ಕಾನ್ಪುರ ಪೊಲೀಸರ ಪ್ರಕಾರ, ಭಾನುವಾರ ಮಧ್ಯರಾತ್ರಿ ಒಂದು ಗಂಟೆಯ ನಂತರ ಕರೆ ಬಂದಿದೆ. ಉದ್ಯಾನವನದ ಬೆಂಚಿನ ನಡುವಿನ ಸಂದಿಯಲ್ಲಿ ವ್ಯಕ್ತಿಯೊಬ್ಬ ಸಿಲುಕಿರುವುದು ತಿಳಿದುಬಂದಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು

@kanpurnagarpol ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವ್ಯಕ್ತಿಯ ನೆರವಿಗೆ ಬಂದ ಪೊಲೀಸರಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 09, 2024 12:20 PM