ಆಕ್ಟ್-1978 ಕನ್ನಡ ಸಿನಿಮಾ ಯಶಸ್ಸು ಕಂಡಿದ್ದು ಇದೀಗ ಹಿಂದಿಗೆ ರೀಮೇಕ್ ಆಗಲಿದೆಯಂತೆ…!
'ಆಕ್ಟ್-1978' ಕನ್ನಡ ಸಿನಿಮಾ ಇದೀಗ ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ. ನಟಿ ಯಜ್ಞಾ ಶೆಟ್ಟಿ ನಟಿಸಿ ಮಿಂಚಿದ್ದ ಹಾಗೂ ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನಿಮಾ ತನ್ನ ವಿಭಿನ್ನ ಕಥೆ ಹಾಗೂ ಅಭಿನಯದಿಂದ ಬಹಳಷ್ಟು ಗಮನ ಸೆಳೆದಿತ್ತು. ಈಗ ಸಿನಿಮಾದ ರೀಮೇಕ್ ಹಕ್ಕು ಬಾಲಿವುಡ್ ಗೆ ಮಾರಾಟವಾಗಿದ್ದು, ಹಿಂದಿಯಲ್ಲಿ ನಮ್ಮ ಕನ್ನಡ ಸಿನಿಮಾ ಮರು ನಿರ್ಮಾಣವಾಗಲಿದೆ. ಅವಕಾಶ ಸಿಕ್ಕರೆ ಹಿಂದಿಯಲ್ಲಿಯೂ ತಾವೇ ನಿರ್ದೇಶಿಸುವುದಾಗಿ ಉತ್ಸುಕತೆ ತೋರಿದ್ದಾರೆ ಕನ್ನಡದ ನಿರ್ದೇಶಕ ಮಂಸೋರೆ.
Latest Videos