ಬಿಜೆಪಿ ಶಾಸಕ ಚಂದ್ರ ಲಮಾಣಿ ವಿರುದ್ಧ ಕಾರ್ಯಕರ್ತರ ಆಕ್ರೋಶ: ಪ್ರಚಾರ ವಾಹನ ಹತ್ತಲು ಬಿಡ್ಲಿಲ್ಲ
ಹಾವೇರಿ ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಶಾಸಕ ಚಂದ್ರ ಲಮಾಣಿ ಪ್ರಚಾರಕ್ಕೆ ಬಂದಿದ್ದರು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಪ್ರಚಾರ ನಡೆದಿದ್ದ ವೇಳೆ ಶಾಸಕರಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಮಾಜಿ ಶಾಸಕ ರಾಮಪ್ಪ ಲಮಾಣಿ ಪರ ನಿಲುವು ತೋರಿದ್ದಕ್ಕೆ ಕಾರ್ಯಕರ್ತರ ಕಡೆಗಣನೆ ಆರೋಪ ಮಾಡಿದ್ದಾರೆ.
ಗದಗ, ಏಪ್ರಿಲ್ 08: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರ ಲಮಾಣಿ (Chandra Lamani) ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಚಾರ ವಾಹನ ಹತ್ತಲು ಬಿಡದೇ ಧಿಕ್ಕಾರ ಕೂಗಿದ್ದಾರೆ. ಹಾವೇರಿ ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಶಾಸಕ ಚಂದ್ರ ಲಮಾಣಿ ಪ್ರಚಾರಕ್ಕೆ ಬಂದಿದ್ದರು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಪ್ರಚಾರ ನಡೆದಿದ್ದ ವೇಳೆ ಶಾಸಕರಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಮಾಜಿ ಶಾಸಕ ರಾಮಪ್ಪ ಲಮಾಣಿ ಪರ ನಿಲುವು ತೋರಿದ್ದಕ್ಕೆ ಕಾರ್ಯಕರ್ತರ ಕಡೆಗಣನೆ ಆರೋಪ ಮಾಡಿದ್ದಾರೆ. ಹೀಗಾಗಿ ಶಾಸಕರು ಪ್ರಚಾರ ವಾಹನ ಹತ್ತಲು ಬಿಡಲ್ಲ ಅಂತಾ ವಿರೋಧ ಮಾಡಿದ್ದಾರೆ. ಬಳಿಕ ಹಿರಿಯರ ಮಧ್ಯಸ್ಥಿತಿ ನಡುವೆ ಪರಿಸ್ಥಿತಿ ತಿಳಿಗೊಂಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 08, 2024 05:50 PM
Latest Videos