ಅಭಿಮಾನಿಗಳಿಗೆ ದರ್ಶನ್ ಮೇಲಿರೋ ಪ್ರೀತಿ ಎಂಥದ್ದು? ಈ ವಿಡಿಯೋನೇ ಸಾಕ್ಷಿ
ಬರ್ತ್ಡೇಗೆ ತರುವ ಕೇಕ್ಗಳು ಪೂರ್ತಿಯಾಗಿ ತಿನ್ನಲಾಗದೆ ಹಾಳಾಗಿ ಹೋಗುತ್ತವೆ. ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ದರ್ಶನ್ ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಫ್ಯಾನ್ಸ್ ಸ್ವೀಕರಿಸಿದ್ದಾರೆ. ಅಕ್ಕಿ ಹಾಗೂ ಇತರ ಧಾನ್ಯ ಹೊತ್ತು ತಂದಿದ್ದಾರೆ.
ನಟ ದರ್ಶನ್ (Darshan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಆರಾಧಿಸುತ್ತಾರೆ. ದರ್ಶನ್ ಹೇಳಿದ್ದನ್ನು ಅಕ್ಷರಶಃ ಪಾಲಿಸೋರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಅವರ ಬರ್ತ್ಡೇನೆ ಸಾಕ್ಷಿ. ಸಾಮಾನ್ಯವಾಗಿ ಹುಟ್ಟುಹಬ್ಬ ಎಂದಾಗ ಅಭಿಮಾನಿಗಳು ಕೇಕ್ ಹಿಡಿದು ಬರುತ್ತಾರೆ. ಆದರೆ, ಈ ರೀತಿ ತರುವ ಕೇಕ್ಗಳು ಪೂರ್ತಿಯಾಗಿ ತಿನ್ನಲಾಗದೆ ಹಾಳಾಗಿ ಹೋಗುತ್ತವೆ. ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ದರ್ಶನ್ ಅವರು ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಫ್ಯಾನ್ಸ್ ಸ್ವೀಕರಿಸಿದ್ದಾರೆ. ಬರ್ತ್ಡೇ ದಿನ ಅಕ್ಕಿ ಮೂಟೆಗಳನ್ನು ಹೊತ್ತು ಬಂದಿದ್ದಾರೆ ಫ್ಯಾನ್ಸ್. ಇವುಗಳನ್ನು ಅಗತ್ಯ ಇರುವವರಿಗೆ ನೀಡಲಾಗುತ್ತದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos