ದಸರಾ ಆನೆಗಳ ಜೊತೆ ಫೋಟೋ ತೆಗೆಸಿಕೊಂಡ ದರ್ಶನ್ ತಾಯಿ ಮೀನಾ ತೂಗುದೀಪ

Updated on: Aug 29, 2025 | 7:15 PM

ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ತಾಯಿ ಮೀನಾ ತೂಗುದೀಪ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಮೀನಾ ಅವರು ಮೈಸೂರು ಅರಮನೆ ಆವರಣಕ್ಕೆ ಭೇಟಿ ನೀಡಿದ್ದಾರೆ. ಅವರ ಜೊತೆ ಮೊಮ್ಮಗ ಚಂದು ಕೂಡ ಬಂದಿದ್ದಾರೆ. ದಸರಾ ಗಜಪಡೆ ಜೊತೆಗೆ ನಿಂತು ಮೀನಾ ಅವರು ಫೋಟೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ.

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ನೋವಿನ ನಡುವೆಯೂ ಅವರ ಕುಟುಂಬದವರು ಮೈಸೂರು ಅರಮನೆ ಆವರಣಕ್ಕೆ ಬಂದಿದ್ದಾರೆ. ಹೌದು, ದರ್ಶನ್ ತಾಯಿ ಮೀನಾ ತೂಗುದೀಪ ಅವರು ದಸರಾ (Dasara) ಗಜಪಡೆಯೊಂದಿಗೆ ಕಾಲ ಕಳೆದಿದ್ದಾರೆ. ದಸರಾ ಆನೆಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಭಿಮನ್ಯು, ಭೀಮ ಆನೆಗಳ ಜೊತೆ ಮೀನಾ ಅವರು ತೆಗೆದುಕೊಂಡ ಫೋಟೋಗಳು ಲಭ್ಯವಾಗಿವೆ. ಮೀನಾ ತೂಗುದೀಪ (Meena Thoogudeepa) ಅವರಿಗೆ ಮೊಮ್ಮಗ ಚಂದು ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.