ದರ್ಶನ್ ಪರಭಾಷೆಯ ಸಿನಿಮಾ ಮಾಡ್ತಾರಾ? ಉತ್ತರಿಸಿದ ನಟ
ನಟ ದರ್ಶನ್ ಅವರು ಇಂದು ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಅವರು ಪರಭಾಷಾ ಸಿನಿಮಾ ಮಾಡುವ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಪರಭಾಷೆಯ ಚಿತ್ರಗಳನ್ನು ಒಪ್ಪಿ ನಟಿಸೋದಿಲ್ಲ ಎಂದು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ.
ನಟ ದರ್ಶನ್ ಅವರು ಪಭಾಷೆಯ ಸಿನಿಮಾ ಮಾಡುತ್ತಾರೆ ಎನ್ನುವ ಗಾಸಿಪ್ ಹಬ್ಬಿತ್ತು. ಇದಕ್ಕೆ ದರ್ಶನ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಪರಭಾಷೆಯ ಸಿನಿಮಾ ಮಾಡುತ್ತಿಲ್ಲ. ನನಗೆ ಇಲ್ಲಿಯೇ ಸಾಕಷ್ಟು ಪ್ರೀತಿ ಸಿಗುತ್ತಿರುವಾಗ ಪರಭಾಷೆಯ ಸಿನಿಮಾ ಏಕೆ? ನನ್ನ ಸಿನಿಮಾಗಳು ಡಬ್ ಆಗಿ ಪ್ರಸಾರ ಕಂಡರೆ ಅದು ಬೇರೆ. ಆದರೆ, ನಾನಾಗೇ ಸಿನಿಮಾ ಮಾಡಲ್ಲ’ ಎಂದು ಅವರು ಹೇಳಿದ್ದಾರೆ. ದರ್ಶನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಹೊರತಾಗಿಯೂ ಪರಭಾಷಾ ಸಿನಿಮಾ ಒಪ್ಪಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.