Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಜನಾದೇಶ ರಾಜಕೀಯದಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಎಂದು ಸಾಬೀತುಪಡಿಸಿದೆ; ಪ್ರಧಾನಿ ಮೋದಿ

ದೆಹಲಿಯ ಜನಾದೇಶ ರಾಜಕೀಯದಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಎಂದು ಸಾಬೀತುಪಡಿಸಿದೆ; ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on: Feb 08, 2025 | 7:54 PM

ಆಡಳಿತ ಆಮ್ ಆದ್ಮಿ ಪಕ್ಷವನ್ನು ಸೋಲಿಸಿದ ನಂತರ ದೆಹಲಿಯಲ್ಲಿ ಬಿಜೆಪಿ ಅದ್ಭುತ ಪುನರಾಗಮನ ಮಾಡಿದೆ. ಚುನಾವಣೆಯಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ವಿಜಯವನ್ನು ಆಚರಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ನವದೆಹಲಿ: ದೆಹಲಿಯ ಜನರು ಇಂದು ನೀಡಿರುವ ಫಲಿತಾಂಶ ರಾಜಕೀಯದಲ್ಲಿ ಯಾವುದೇ ಶಾರ್ಟ್​ಕಟ್ ಅಥವಾ ಅಡ್ಡದಾರಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದೆ. “ಶಾರ್ಟ್‌ಕಟ್ ರಾಜಕೀಯವು ಶಾರ್ಟ್‌ ಸರ್ಕ್ಯೂಟ್ ಆಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಚುನಾವಣೆಯ ಗೆಲುವಿನ ಕುರಿತು ತಮ್ಮ ಭಾಷಣದಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ರಾಜಕೀಯವನ್ನು ಬದಲಾಯಿಸುವುದಾಗಿ ಹೇಳಿತು. ಆದರೆ ಅವರೇ ಭ್ರಷ್ಟರಾಗಿದ್ದಾರೆ. ಪಕ್ಷದ ಆರಂಭವು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿತ್ತು. ಆದರೆ ಅದರ ಮುಖ್ಯಮಂತ್ರಿ ಮತ್ತು ಇತರ ಸಚಿವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದರು. ಅವರು ದೆಹಲಿಯ ನಂಬಿಕೆಗೆ ದ್ರೋಹ ಬಗೆದರು ಎಂದು ಮೋದಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ