ಸಂಗೀತ ನಿರ್ದೇಶಕನಾದ ಪ್ರಶಾಂತ್ ಸಿದ್ಧಿ ಹಾದಿ ಬದಲಿಸಿದ್ದು ಏಕೆ?

|

Updated on: Jan 10, 2024 | 11:06 PM

Prashanth Siddi: ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಶಾಂತ್ ಸಿದ್ಧಿ ಈಗ ಸಂಗೀತ ನಿರ್ದೇಶಕ ಆಗಿದ್ದಾರೆ. ‘ಮತ್ಸ್ಯಗಂಧ’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

‘ಪರಮಾತ್ಮ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಪ್ರಶಾಂತ್ ಸಿದ್ಧಿ (Prashanth Siddi) ಈಗ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ, ವಿಲನ್, ಪೋಷಕ ಪಾತ್ರ ಹೀಗೆ ಹಲವು ರೀತಿಯ ಪಾತ್ರಗಳಲ್ಲಿ ಪ್ರಶಾಂತ್ ಸಿದ್ಧಿ ನಟಿಸಿದ್ದಾರೆ. ಈಗಲೂ ಬೇಡಿಕೆಯ ಪೋಷಕ ನಟರಾಗಿರುವ ಪ್ರಶಾಂತ್ ಸಿದ್ಧಿ ಈಗ ಸಂಗೀತ ನಿರ್ದೇಶಕ ಆಗಲು ಸಜ್ಜಾಗಿದ್ದಾರೆ. ‘ಮತ್ಸ್ಯಗಂಧ’ ಹೆಸರಿನ ಸಿನಿಮಾಕ್ಕೆ ಪ್ರಶಾಂತ್ ಸಿದ್ಧಿ ಸಂಗೀತ ನೀಡುತ್ತಿದ್ದಾರೆ. ಸಿನಿಮಾದಲ್ಲಿ ಖಳನಟನಾಗಿಯೂ ಪ್ರಶಾಂತ್ ನಟಿಸಿದ್ದಾರೆ. ತಮಗೆ ಎಳವೆಯಿಂದಲೂ ಇರುವ ಜನಪದದ ಮೇಲಿನ ಆಸಕ್ತಿ, ತಾಯಿ ಹಾಡುತ್ತಿದ್ದ ಹಾಡುಗಳು, ರಂಗಗೀತೆಗಳ ಪ್ರೇರಣೆಯಿಂದಲೇ ಸಂಗೀತ ನಿರ್ದೇಶಕ ಆಗಿದ್ದಾಗಿ ಪ್ರಶಾಂತ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ