ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಅಂತಷ್ಟೇ ರಾಯರೆಡ್ಡಿ ಹೇಳಿರುವುದು: ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚುವರಿ ಬೀಳುತ್ತೆ ಅಂತ ರಾಯರೆಡ್ಡಿ ಹೇಳಿದ್ದಾರೆ, ಅದರರ್ಥ ಬಿಜೆಪಿಯವರು ಹೇಳುವ ಹಾಗೆ, ಸರ್ಕಾರದಲ್ಲಿ ಹಣವಿಲ್ಲ ಅಂತಲ್ಲ, ಬೊಕ್ಕಸವೇನೂ ಖಾಲಿಯಾಗಿಲ್ಲ, ಸರ್ಕಾರದ ಎಂದಿನ ಕಾರ್ಯಕ್ರಮಗಳು ಮೊದಲಿನ ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು,

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಅಂತಷ್ಟೇ ರಾಯರೆಡ್ಡಿ ಹೇಳಿರುವುದು: ಸಿದ್ದರಾಮಯ್ಯ
|

Updated on: Jan 10, 2024 | 7:27 PM

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದಾಗ, ಅದನ್ನು ತಾನು ಉತ್ತರಿಸಬೇಕೋ ಅಥವಾ ಮುಖ್ಯಮಂತ್ರಿ ಉತ್ತರಿಸಬೇಕೋ ಅಂತ ಡಿಕೆ ಶಿವಕುಮಾರ್ (DK Shivakumar) ಗೊಂದಲಕ್ಕೆ ಬಿದ್ದರು. ಅವರು ಸಿದ್ದರಾಮಯ್ಯನವರಿಗೆ (Siddaramaiah) ಸನ್ನೆ ಮೂಲಕ ಹೇಳಿದಾಗ ಅವರು ಆಯಮ್ಮ ನನಗಲ್ಲ, ನಿನಗೆ ಕೇಳಿದ್ದಯ್ಯ, ನೀನೇ ಉತ್ತರಿಸು ಅಂತ ತಮಾಷೆ ಮಾಡುತ್ತಾರೆ. ನಂತರ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಿದ್ದರಾಮಯ್ಯ, ತಮ್ಮ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ (Basavaraj Rayareddy) ನೀಡಿದ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚುವರಿ ಬೀಳುತ್ತೆ ಅಂತ ಅವರು ಹೇಳಿದ್ದಾರೆ, ಅದರರ್ಥ ಬಿಜೆಪಿಯವರು ಹೇಳುವ ಹಾಗೆ, ಸರ್ಕಾರದಲ್ಲಿ ಹಣವಿಲ್ಲ ಅಂತಲ್ಲ, ಬೊಕ್ಕಸವೇನೂ ಖಾಲಿಯಾಗಿಲ್ಲ, ಸರ್ಕಾರದ ಎಂದಿನ ಕಾರ್ಯಕ್ರಮಗಳು ಮೊದಲಿನ ಹಾಗೆಯೇ ಜಾರಿಯಲ್ಲಿರುತ್ತವೆ, ಅವುಗಳ ಜೊತೆ ಗ್ಯಾರಂಟಿಗಳು ಸೇರಿರುವುದರಿಂದ ಖಜಾನೆ ಮೇಲೆ ಹೆಚ್ಚುವರಿ ಬಿದ್ದಿದೆ ಅಂತ ರಾಯರೆಡ್ಡಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಬಜೆಟ್ ಮಂಡಿಸಿರುವ ತನಗೆ ಎಲ್ಲ ಯೋಜನೆಗಳ ಖರ್ಚುವೆಚ್ಚದ ಸಂಪೂರ್ಣ ಜ್ಞಾನವಿದೆ, ಗ್ಯಾರಂಟಿ ಯೋಜನೆಗಳಿಂದಾಗಿ ಬೇರೆ ಯಾವುದೇ ಕಾರ್ಯಕ್ರಮ ನಿಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us