AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಮತ್ತೊಮ್ಮೆ ಬಂಧನ, ಈ ಬಾರಿ ಎನ್​ಡಿಎಂಎ ಕಾಯ್ದೆ ಅಡಿ ಪೊಲೀಸರ ವಶಕ್ಕೆ!

ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಮತ್ತೊಮ್ಮೆ ಬಂಧನ, ಈ ಬಾರಿ ಎನ್​ಡಿಎಂಎ ಕಾಯ್ದೆ ಅಡಿ ಪೊಲೀಸರ ವಶಕ್ಕೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 10, 2024 | 6:23 PM

ನಿನ್ನೆ ಜಾಮೀನು ವಿಷಯದಲ್ಲಿ ವಾದ ಪ್ರತಿವಾದ ನಡೆದ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿ ಇವತ್ತು ಬೇಲ್ ಮಂಜೂರು ಮಾಡಿತ್ತು. ಆದರೆ, ಕಾನೂನು ಪ್ರಕ್ರಿಯಗಳೆಲ್ಲ ಮುಗಿದು ನಾರಾಯಣಗೌಡ ಇಂದು ಜೈಲಿನಿಂದ ಹೊರಬೀಳುತ್ತಿದ್ದತೆಯೇ ಹಲಸೂರು ಗೇಟ್ ಪೋಲಿಸರು ಎನ್ ಡಿಎಂಎ ಪ್ರಕರಣವೊಂದರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡರ (TA Narayana Gowda) ಬಂಧನ-ಬಿಡುಗಡೆ-ಬಂಧನ ಪ್ರಹಸನ ಮುಂದುವರಿದಿದೆ. ರಾಜ್ಯದಲ್ಲಿ ವಾಣಿಜ್ಯ ಮಳಿಗೆ ಮತ್ತು ಕೈಗಾರಿಕೆಗಳ ಬೋರ್ಡ್ಗಳು ಕನ್ನಡದಲ್ಲಿರುಬೇಕೆಂದು (name boards in Kannada) ಕಳೆದ ವಾರ ಪ್ರತಿಭಟನೆ ನಡೆಸುವಾಗ ಅಂಗಡಿ-ಮುಗ್ಗಟ್ಟುಗಳ ಬೋರ್ಡ್ ಗಳನ್ನು ಒಡೆದು ಹಾಕಿ ದಾಂಧಲೆ (vandalism) ನಡೆಸಿದ ಹಿನ್ನೆಲೆಯಲ್ಲಿ ನಾರಾಯಣಗೌಡ ಮತ್ತು ಅವರ ಸಂಗಡಿಗರನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕು ನಿನ್ನೆ ಬಿಡುಗಡೆಯಾದ ನಂತರ 2017 ರ ಪ್ರಕರಣವೊಂದರಲ್ಲಿ ಅವರನ್ನು ಪುನಃ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ನಿನ್ನೆ ಜಾಮೀನು ವಿಷಯದಲ್ಲಿ ವಾದ ಪ್ರತಿವಾದ ನಡೆದ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿ ಇವತ್ತು ಬೇಲ್ ಮಂಜೂರು ಮಾಡಿತ್ತು. ಆದರೆ, ಕಾನೂನು ಪ್ರಕ್ರಿಯಗಳೆಲ್ಲ ಮುಗಿದು ನಾರಾಯಣಗೌಡ ಇಂದು ಜೈಲಿನಿಂದ ಹೊರಬೀಳುತ್ತಿದ್ದತೆಯೇ ಹಲಸೂರು ಗೇಟ್ ಪೋಲಿಸರು ಎನ್ ಡಿಎಂಎ ಪ್ರಕರಣವೊಂದರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಟಿವಿ9 ಬೆಂಗಳೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಗೌಡರನ್ನು ನಗರದ 30ನೇ ಎಸಿಎಂಎಂ ಕೋರ್ಟ್ ನಲ್ಲಿ ಹಾಜರುಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ