ಕನ್ನಡಪರ ಹೋರಾಟಗಾರರಿಗೆ ತೊಂದರೆ ಕೊಡುತ್ತಿರುವ ಸರ್ಕಾರಕ್ಕೆ ಇದರ ಪರಿಣಾಮ ಮುಂದೆ ಗೊತ್ತಾಗಲಿದೆ: ನಾರಾಯಣಗೌಡ ಪರ ವಕೀಲ
ಕನ್ನಡ ಪರ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಈಗ ಕನ್ನಡ ವಿರೋಧಿ ಧೋರಣೆ ತಳೆದು, ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕೆಂದು ರಾಜ್ಯದೆಲ್ಲೆಡೆ ಹೋರಾಟ ನಡೆಯುತ್ತಿದ್ದರೂ ನಾರಾಯಣಗೌಡರು ಯಾರೋ? ಕರ್ನಾಟಕ ರಕ್ಷಣಾ ವೇದಿಕೆ ಯಾವುದೋ? ಕನ್ನಡ ಎಲ್ಲಿಯದೋ? ಎಂಬಂತೆ ವರ್ತಿಸುತ್ತಿದೆ ಎಂದು ವಕೀಲ ಹೇಳಿದರು.
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡರನ್ನು (TA Narayanagowda) ಮತ್ತೊಂದು ಪ್ರಕರಣದಲ್ಲಿ ಜೈಲಿಗೆ ಕರೆದೊಯ್ಯಲಾಗಿದೆ. ಮೊದಲು ಬಂದನಕ್ಕೊಳಗಾಗಿದ್ದ ಪ್ರಕರಣದಲ್ಲಿ ಅವರಿಗೆ ಜಾಮೀನು (bail) ಸಿಕ್ಕು ಜೈಲಿನಿಂದ ಹೊರಗೆ ಕೂಡ ಬಂದಿದ್ದರು. ಆದರೆ, ಹೊರಬರುತ್ತಿದ್ದೆಯೇ 2017ರ ಇನ್ನೊಂದು ಪ್ರಕರಣದಲ್ಲಿ (another case) ಗೌಡರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ ಎಂದು ನಾರಾಯಣಗೌಡ ಪರ ವಾದಿಸಿದ ವಕೀಲ ಹೇಳಿದರು. ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿರುವ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ವಿನಾಕಾರಣ ತೊಂದರೆಗೊಳಪಡಿಸಲಾಗುತ್ತಿದೆ ಎಂದು ವಕೀಲ ಹೇಳಿದರು. ಮತ್ತೊಬ್ಬ ವಕೀಲ ಆವೇಶದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ನಾರಾಯಣಗೌಡರ ವಿಷಯದಲ್ಲಿ ರಾಜಕೀಯ ಪಿತೂರಿ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಕನ್ನಡ ಪರ ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಈಗ ಕನ್ನಡ ವಿರೋಧಿ ಧೋರಣೆ ತಳೆದು, ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕೆಂದು ರಾಜ್ಯದೆಲ್ಲೆಡೆ ಹೋರಾಟ ನಡೆಯುತ್ತಿದ್ದರೂ ನಾರಾಯಣಗೌಡರು ಯಾರೋ? ಕರ್ನಾಟಕ ರಕ್ಷಣಾ ವೇದಿಕೆ ಯಾವುದೋ? ಕನ್ನಡ ಎಲ್ಲಿಯದೋ? ಎಂಬಂತೆ ವರ್ತಿಸುತ್ತಿದೆ. ನಾರಾಯಣಗೌಡರ ಹೋರಾಟವನ್ನು ಮನಗಂಡೇ ಬಿಬಿಎಂಪಿ ಎಲ್ಲ ಅಂಗಡಿಗಳ ಬೋರ್ಡ್ ಗಳು ಶೇಕಡಾ 60ರಷ್ಟು ಕನ್ನಡದಲ್ಲಿ ಬರೆಸಲು 28 ರವರೆಗೆ ಗಡುವು ನೀಡಿದೆ ಎಂದ ಅವರು ಕನ್ನಡ ಪರ ಹೋರಾಟಗಾರರಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ಸರ್ಕಾರಕ್ಕೆ ಇದರ ಪರಿಣಾಮ ಮುಂದೆ ಗೊತ್ತಾಗಲಿದೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ