Sign In

By signing in or creating an account, you agree with Associated Broadcasting Company's Terms & Conditions and Privacy Policy.

Old Age Pension: ಮಾಸಾಶನವೆಂಬ ತನ್ನ ಸರಕಾರಿ ಹಕ್ಕು ಚಲಾಯಿಸಲು ಪೋಸ್ಟ್​​​ಮನ್ ಬಳಿಗೆ ತೆವಳಿಕೊಂಡು ಬಂದ ಹಿರಿಯ ಜೀವ

Old Age Pension: ಮಾಸಾಶನವೆಂಬ ತನ್ನ ಸರಕಾರಿ ಹಕ್ಕು ಚಲಾಯಿಸಲು ಪೋಸ್ಟ್​​​ಮನ್ ಬಳಿಗೆ ತೆವಳಿಕೊಂಡು ಬಂದ ಹಿರಿಯ ಜೀವ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Jan 09, 2024 | 5:41 PM

ಮಾಸಾಶನ ಪಡೆಯಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿದ್ದು, ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡವಾಗಿ ಎಚ್ಚೆತ್ತ ಗ್ರಾಮ ಪಂಚಾಯತ್ ಅಧಿಕಾರಿಗಳು ಆ ಹಿರಿಯ ಜೀವವನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.

ದಾವಣಗೆರೆ, ಜನವರಿ 9: ಆ ಹಣ್ಣು ಹಣ್ಣು ಮುದುಕಿ ತನ್ನ ಇಳಿವಯಸ್ಸಿನಲ್ಲಿ ತನ್ನ ಸರಕಾರಿ ಹಕ್ಕು ಚಲಾಯಿಸಲು ಅಂದರೆ ತನಗೆ ಸಲ್ಲಬೇಕಾದ ಅರ್ಹ ಮಾಸಾಶನ ಹಣ ಪಡೆಯಲು ಬರೋಬ್ಬರಿ 2 ಕಿಲೋ ಮೀಟರ್ ತೆವಳಿಕೊಂಡು ಬಂದಿದ್ದಾರೆ! ಎಂಬಲ್ಲಿಗೆ ಮಾನವೀಯತೆಯ ಮತ್ತೊಂದು ಮುಖ/ ಮಜಲು ಅನಾವರಣಗೊಂಡಿದೆ. ಹೌದು ಕಾಲಿಲ್ಲದ ಅಜ್ಜಿ ಗಿರಿಜಮ್ಮ ಅವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದ ನಿವಾಸಿ.

ಮಾಸಾಶನ ಪಡೆಯಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿದ್ದು, ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡವಾಗಿ ಎಚ್ಚೆತ್ತ ಗ್ರಾಮ ಪಂಚಾಯತ್ ಅಧಿಕಾರಿಗಳು ಆ ಹಿರಿಯ ಜೀವವನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.

ಬಂದಿದ್ದು ಮಾಸಾಶನಕ್ಕಾದರೂ ತಾನು ಆಸ್ಪತ್ರೆ ಪಾಲಾಗಿರುವ ಅಜ್ಜಿ ಗಿರಿಜಮ್ಮ ಅವರು ಬೇಜವಾಬ್ದಾರಿ ಪೋಸ್ಟಮನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ 2400 ರೂಪಾಯಿ ಬರಬೇಕಿದೆ. ಅದಕ್ಕಾಗಿ ಅವನನ್ನು (ಪೋಸ್ಟಮನ್) ಭೇಟಿಯಾಗಬೇಕೆಂದು ತೆವಳಿಕೊಂಡು ಬಂದೆ. ನನಗೆ ಇದುವರೆಗೂ ದುಡ್ಡು ಬಂದಿಲ್ಲ. ಪೋಸ್ಟಮನ್ ಧಿಮಾಕಿನಿಂದ ಮಾತನಾಡುತ್ತಾನೆ ಎಂದು ತಮ್ಮ ಬೊಚ್ಚುಬಾಯಿಂದಲೇ ಹಲ್ಲುಕಡಿದರು.

ಇದೇ ವೇಳೆ, ನನ್ನ ಗಂಡನ 10 ಸಾವಿರ ಹಣವನ್ನು ಬ್ಯಾಂಕ್ ನವರೂ ಕೊಡಲಿಲ್ಲ. ನನ್ನ ಮಾಸಾಶನ ಕೂಡ ಬಂದಿಲ್ಲ, ನನಗೆ ದಿಕ್ಕುದೆಶೆ ಯಾರೂ ಇಲ್ಲ ಎಂದು ಅಜ್ಜಿ ತಮ್ಮ ಅಳಲು ತೋಡಿಕೊಂಡಾಗ ಸುತ್ತಲೂ ನೆರದಿದ್ದವರ ಕಣ್ಣಾಲಿ ತೇವಗೊಂಡಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ