ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮಾತಾಡುತ್ತಿದ್ದಾಗ ಸಭಿಕನೊಬ್ಬ ಎದ್ದುನಿಂತು ಕಾಂತರಾಜ್ ವರದಿ ಯಾವಾಗ ಬಿಡುಗಡೆ ಮಾಡ್ತೀರಿ ಅಂದ!
ಆಯೋಗಕ್ಕೆ ಈಗ ಕಾಂತರಾಜ್ ಅವರು ಅಧ್ಯಕ್ಷರಾಗಿಲ್ಲ, ಜಯಪ್ರಕಾಶ್ ಹೆಗಡೆಯವರು ಆಗಿದ್ದಾರೆ ಎಂದು ಹೇಳುವ ಸಿದ್ದರಾಮಯ್ಯ, ವರದಿ ಅಂತಿಮಗೊಳಿಸಲು ಅವರು ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ, ಅವರು ವರದಿ ಸಲ್ಲಿಸಿದ ಮೇಲೆ ಸಾರ್ವಜನಿಕ ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ಬೆಂಗಳೂರು: ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾತಾಡುತ್ತಿದ್ದಾಗ ಸಭಿಕರಲ್ಲಿದ್ದ ವ್ಯಕ್ತಿಯೊಬ್ಬ ಪದೇಪದೆ ಅಡ್ಡಿಪಡಿಸಿದ ಘಟನೆ ಜರುಗಿತು. ಆ ವ್ಯಕ್ತಿ ಮೊದಲಿಗೆ ಕಾಂತರಾಜ್ ವರದಿ (Kantharaj report) ಯಾವಾಗ ಬಿಡುಗಡೆ ಮಾಡ್ತೀರಿ ಅಂತ ಕೇಳುತ್ತಾನೆ. ಆಯೋಗಕ್ಕೆ ಈಗ ಕಾಂತರಾಜ್ ಅವರು ಅಧ್ಯಕ್ಷರಾಗಿಲ್ಲ, ಜಯಪ್ರಕಾಶ್ ಹೆಗಡೆಯವರು (Jayaprakash Hegde) ಆಗಿದ್ದಾರೆ ಎಂದು ಹೇಳುವ ಸಿದ್ದರಾಮಯ್ಯ, ವರದಿ ಅಂತಿಮಗೊಳಿಸಲು ಅವರು ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ, ಅವರು ವರದಿ ಸಲ್ಲಿಸಿದ ಮೇಲೆ ಸಾರ್ವಜನಿಕ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಅಷ್ಟು ಹೇಳಿದ ಬಳಿಕ ಮುಖ್ಯಮಂತ್ರಿ ತಮ್ಮ ಭಾಷಣ ಮುಂದುವರಿಸಲು ಮುಂದಾಗುತ್ತಿದ್ದಂತೆಯೇ ವ್ಯಕ್ತಿ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೇನೋ ಕೇಳುತ್ತಾನೆ. ಆಗಲೂ ತಾಳ್ಮೆ ಕಳೆದುಕೊಳ್ಳದ ಸಿದ್ದರಾಮಯ್ಯ ಕಾಂತರಾಜ್ ಅವರು ವರದಿ ಸಲ್ಲಿಸಲು ಹೋದಾಗ ಸ್ವೀಕರಿಸಲು ನಿರಾಕರಿಸಿದವರ ಬಗ್ಗೆ ನಿನೇನೂ ಮಾತಾಡಲ್ಲ, ಕಾಂತರಾಜ್ ಆಯೋಗ ರಚಿಸಿದ್ದ ನನಗೆ ಪ್ರಶ್ನೆಗಳನ್ನು ಕೇಳ್ತಾ ಇದ್ದೀಯಾ ಅನ್ನುತ್ತಾರೆ. ಅಷ್ಟಕ್ಕೂ ಸುಮ್ಮನಾಗದ ವ್ಯಕ್ತಿ, ಮತ್ತೇನೋ ಕೇಳುತ್ತಾನೆ. ಆ ಸಿಡಿಮಿಡಿಗೊಳ್ಳುವ ಸಿದ್ದರಾಮಯ್ಯ ನಾನಿಲ್ಲಿಗೆ ಬಂದಿರೋದು ಭಾಷಣ ಮಾಡೋದಿಕ್ಕಾ ಅಥವಾ ನಿನ್ ಜೊತೆ ಸಂಭಾಷಣೆ ನಡೆಸೋದಿಕ್ಕಾ, ಭಾಷಣ ಕೇಳುವ ಮನಸಿದ್ರೆ ಕೂತ್ಕೋ ಇಲ್ಲಾಂದ್ರೆ ಹೋಗ್ತಾ ಇರು ಅಂತ ಗದರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ