ಶಿರಡಿ ಸಾಯಿಬಾಬಾಗೆ ಪೂಜೆ ಸಲ್ಲಿಸಿ ನಾಡಿನ ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ X ಹ್ಯಾಂಡಲ್ ನಲ್ಲಿ ಚಿತ್ರಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ತಮ್ಮ ಸಂದೇಶದಲ್ಲಿ ಅವರು ಮಳೆ-ಬೆಳೆ ಉತ್ತಮವಾಗಲಿ, ನಾಡಿನಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಗೊಂಡಿರಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಶಿರಡಿ (ಮಹಾರಾಷ್ಟ್ರ): ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆದ ನಂತರ ಸಿದ್ದರಾಮಯ್ಯ (CM Siddaramaiah) ಅವರಲ್ಲಿ ಧಾರ್ಮಿಕತೆ ಹೆಚ್ಚಾಗಿದೆ ಅಂತ ಕನ್ನಡಿಗರು ಭಾವಿಸಿದ್ದರೆ ಆಶ್ಚರ್ಯವಿಲ್ಲ. ಹಾಗಂತ ಅವರು ನಿರೀಶ್ವರವಾದಿ (atheist), ನಾಸ್ತಿಕ ಅಂತೇನೂ ಭಾವಿಸಬೇಕಿಲ್ಲ ಮಾರಾಯ್ರೇ. ಖುದ್ದು ಸಿಎಂ ಹಲವಾರು ಬಾರಿ ಹೇಳಿರುವ ಹಾಗೆ ಅವರೊಬ್ಬ ದೈವಭಕ್ತ ಆದರೆ ವಿಚಾರವಾದಿ (rationalist). ಮೂಢನಂಬಿಕೆಗಳಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಳೆದ ತಿಂಗಳಷ್ಟೇ ಅವರು ಮೈಸೂರು ಭೇಟಿಯ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ್ದರು ಮತ್ತು ನಿಯಮಿತವಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದರ್ಶನ ಪಡೆಯುತ್ತಾರೆ. ಇದನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಸಿದ್ದರಾಮಯ್ಯ ರವಿವಾರದಂದು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿರುವ ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಯವರೊಂದಿಗೆ ಕಾನೂನು ಮತ್ತು ಸಂಸದೀಯ ವ್ಯವಾಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮತ್ತು ಸಿದ್ದರಾಮಯ್ಯರ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದ ರಾಜ್ ಇರುವುದನ್ನು ದೃಶ್ಯಗಳಲ್ಲಿ ನೋಡಬಹದು
ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಳೆ – ಬೆಳೆ ಉತ್ತಮವಾಗಲಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸಿದೆ. pic.twitter.com/BRxs5GtGmU
— Siddaramaiah (@siddaramaiah) January 7, 2024
ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ