ನೇಹಾ ಹಿರೇಮಠ್​ ಹತ್ಯೆ: ಫಯಾಜ್​ಗೆ ಭಾರತ ರತ್ನ ಕೊಡಿ ಅಂತ ಪ್ರಥಮ್​ ಹೇಳಿದ್ದು ಯಾಕೆ?

| Updated By: ಮದನ್​ ಕುಮಾರ್​

Updated on: Apr 21, 2024 | 5:56 PM

‘ನನ್ನ ಬಾಯಲ್ಲಿ ಅವನ ಹೆಸರು ಹೇಳಲ್ಲ. ಅವನಿಗೆ ಆ ಯೋಗ್ಯತೆ ಇಲ್ಲ. ಮುಸ್ಲಿಮರಲ್ಲಿ ನಾನು ಒಂದೇ ಕೇಳಿಕೊಳ್ಳುವುದು. ಲವ್​ ಮಾಡಬೇಕು ಎಂದರೆ ನಿಮ್ಮವರನ್ನೇ ಮಾಡಿಕೊಳ್ಳಿ. ಹಿಂದು ಹುಡುಗಿಯರ ಜೊತೆ ನಿಮಗೆ ಲವ್​ ಯಾಕೆ? ಅದು ನನಗೆ ಇಷ್ಟ ಆಗುವುದಿಲ್ಲ. ಪ್ರೀತಿಗೆ ಕಣ್ಣಿಲ್ಲ ಅಂತ ಸಿನಿಮಾದಲ್ಲಿ ಡೈಲಾಗ್​ ಹೊಡೆಯುವ ಯಾವನಾದ್ರೂ ಇಲ್ಲಿ ಬಂದು ನ್ಯಾಯ ಕೊಡಿಸುತ್ತಾನಾ’ ಎಂದು ಪ್ರಥಮ್​ ಪ್ರಶ್ನಿಸಿದ್ದಾರೆ.

ಪ್ರೀತಿ ನಿರಾಕರಿಸಿದ ನೇಹಾ ಹಿರೇಮಠ್​ (Neha Hiremath) ಅವರನ್ನು ಕೊಲೆ ಮಾಡಿದ ಫಯಾಜ್ (Fayaz)​ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತ ಆಗುತ್ತಿದೆ. ಹಲವಾರು ಸೆಲೆಬ್ರಿಟಿಗಳು ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ನಟ ಪ್ರಥಮ್​ ಅವರು ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್​ ಅವರ ಪಾಲಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಪ್ರಥಮ್​ ಅವರು ಫಯಾಜ್​ನ ತಾಯಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದಾರೆ. ‘ನನ್ನ ಮಗ ಅಂಥವನಾಗಿರಲಿಲ್ಲ’ ಎಂದು ಫಯಾಜ್​ ತಾಯಿ ಹೇಳಿದ್ದಕ್ಕೆ ಪ್ರಥಮ್ (Pratham)​ ವ್ಯಂಗ್ಯವಾಗಿದ್ದಾರೆ. ‘ನನ್ನ ಮಗ ಸೊಳ್ಳೆಯನ್ನೂ ಹೊಡೆಯಲ್ಲ ಅಂತ ಅವರ ತಾಯಿ ಕೇಳಿದ್ರಂತೆ. ಹಾಗಾದರೆ ಅವರ ಹುಡುಗ ಕೊಲೆ ಮಾಡಿಲ್ಲ. ಸಿಜೆ ಅಥವಾ ಎಐ ಮೂಲಕ ಈ ರೀತಿ ಚುಚ್ಚಿದ್ದಾರೆ. ವಿರೋಧ ಪಕ್ಷದವರು ಹೀಗೆಲ್ಲ ಮಾಡಿದ್ದಾರೆ. ಅವನು ಬಹಳ ಮುಗ್ಧ. ಈ ವರ್ಷದ ಭಾರತ ರತ್ನ, ನೋಬೆಲ್​, ಆಸ್ಕರ್​ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಅವನ ಹೆಸರನ್ನು ಶಿಫಾರಸು ಮಾಡಬೇಕು ಹಾಗೂ ತಕ್ಷಣದಲ್ಲಿ ಅವನಿಗೆ ಪ್ರಶಸ್ತಿ ಕೊಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ’ ಎಂದು ಪ್ರಥಮ್ ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.