‘ಸಲಗದ್ದು ಪಾತ್ರವಲ್ಲ, ಅದು ನನಗೆ ಜೀವನ’; ನಟ ಸುಧೀ ಹೀಗೆ ಹೇಳಿದ್ದೇಕೆ?

Edited By:

Updated on: Feb 03, 2022 | 10:01 AM

ಸಲಗ ಚಿತ್ರದ ಕುರಿತು ಹಾಗೂ ದುನಿಯಾ ವಿಜಯ್ ಕುರಿತು ನಟ ಕಾಕ್ರೋಚ್ ಸುಧೀ ಮಾತನಾಡಿದ್ದಾರೆ. ‘ಗೌಳಿ’ ಚಿತ್ರದ ಟೀಸರ್ ರಿಲೀಸ್ ಈವೆಂಟ್​ನಲ್ಲಿ ಅವರು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.

ತಮ್ಮ ಪಾತ್ರಪೋಷಣೆಯಿಂದಲೇ ಗುರುತಿಸಿಕೊಳ್ಳುತ್ತಿರುವ ನಟ ಸುಧೀ. ‘ಟಗರು’ ಮೂಲಕ ಕಾಕ್ರೋಚ್ ಸುಧೀ ಎಂದು ಅವರು ಅಭಿಮಾನಿ ವಲಯದಲ್ಲಿ ಗುರುತಿಸಿಕೊಂಡರು. ಆದರೆ ಕಳೆದ ಲಾಕ್​ಡೌನ್ ಸಂದರ್ಭದಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಕೈಹಿಡಿದಿದ್ದು ಯಾರು ಎಂಬುದನ್ನು ಅವರು ‘ಗೌಳಿ’ ಟೀಸರ್ ರಿಲೀಸ್ ಈವೆಂಟ್​ನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘‘ದುನಿಯಾ ವಿಜಯ್ ಅವರ ಸಲಗದಲ್ಲಿ ನನ್ನದು ಪಾತ್ರವಾಗಿರಲಿಲ್ಲ. ನನ್ನ ಬದುಕದು’’ ಎಂದು ಅವರು ಹೇಳಿಕೊಂಡಿದ್ದಾರೆ. ‘ಲಾಕ್​ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದೆ. ಆಗ ಕೈಹಿಡಿದವರು ದುನಿಯಾ ವಿಜಯ್’ ಎಂದಿರುವ ಸುಧೀ ಅವರಿಗೆ ಧನ್ಯವಾದ ಹೇಳಿದ್ದಾರೆ.

ಗೌಳಿ ಚಿತ್ರದ ಕುರಿತು ಮಾತನಾಡಿರುವ ಸುಧೀ, ಇನ್ನೂ ಹತ್ತು ದಿನಗಳ ಚಿತ್ರೀಕರಣ ಬಾಕಿ ಇದೆ. ನನ್ನ ಪಾತ್ರ ಪೋಷಣೆ ನೋಡಿ ಶ್ರೀನಗರ ಕಿಟ್ಟಿ ಕರೆ ಮಾಡಿ ಹೊಗಳಿದ್ದರು. ಇನ್ನಷ್ಟು ಪ್ರಯತ್ನಪಟ್ಟು ಪಾತ್ರಕ್ಕೆ ಜೀವ ತುಂಬಲು ಯತ್ನಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:

Gowli Teaser: ‘ಗೌಳಿ’ ಮೂಲಕ ಶ್ರೀನಗರ ಕಿಟ್ಟಿ ಭರ್ಜರಿ ಕಮ್​ಬ್ಯಾಕ್; ಫ್ಯಾನ್ಸ್ ಮನಗೆಲ್ಲುತ್ತಿರುವ ಟೀಸರ್ ಇಲ್ಲಿದೆ 

Srinagar Kitty: ‘ಗೌಳಿ’ ಚಿತ್ರದ ಕುರಿತು ಕುತೂಹಲಕರ ಮಾಹಿತಿ ಹಂಚಿಕೊಂಡ ನಿರ್ದೇಶಕ ಸೂರ

Published on: Feb 03, 2022 09:59 AM
Loading...
Unable to load recommendations.
Follow Us
TV9 Web

TV9 Kannada

Read More