ಹೊಸ ಕಾರು ಖರೀದಿ ಮಾಡಿದ ಹರಿಪ್ರಿಯಾ-ವಸಿಷ್ಠ ದಂಪತಿ; ಬೆಲೆ ಎಷ್ಟು ಕೋಟಿ?

|

Updated on: Apr 29, 2024 | 8:31 AM

ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಇದಾಗಿದ್ದು, ಸಖತ್ ಐಷಾರಾಮಿ ಆಗಿದೆ. ಕಾರನ್ನು ಖರೀದಿಸೋ ಸಂದರ್ಭದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ ದಂಪತಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಇದಾಗಿದ್ದು, ಸಖತ್ ಐಷಾರಾಮಿ ಆಗಿದೆ. ಕಾರನ್ನು ಖರೀದಿಸೋ ಸಂದರ್ಭದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೋರೂಂನಲ್ಲಿ ಸಖತ್ ಅದ್ದೂರಿಯಾಗಿ ಡೆಕೋರೇಟ್ ಮಾಡಲಾಗಿತ್ತು. ಮೊದಲು ಕಾರನ್ನೇರಿದ ಹರಿಪ್ರಿಯಾ ಅವರು ಕಾರನ್ನು ಓಡಿಸಿದರು. ಬೆಂಗಳೂರಿನಲ್ಲಿ ಈ ಕಾರಿನ ಬೆಲೆ 1.20-1.40 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದರಲ್ಲಿ 1993 ಸಿಸಿ ಹಾಗೂ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್​ಮೀಷನ್​ನ ಈ ಕಾರು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.