ಯೂಟ್ಯೂಬ್​ನಿಂದ ಅದಿತಿ ಎಷ್ಟು ದುಡ್ಡು ಮಾಡ್ತಾರೆ? ಎಳೆಎಳೆಯಾಗಿ ವಿವರಿಸಿದ ‘ಓಲ್ಡ್​ ಮಾಂಕ್​’ ನಟಿ

| Updated By: ಮದನ್​ ಕುಮಾರ್​

Updated on: Feb 22, 2022 | 7:30 AM

ನಟಿ ಅದಿತಿ ಪ್ರಭುದೇವ ಅವರಿಗೆ ಸಖತ್ ಜನಪ್ರಿಯತೆ ಇದೆ. ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿರುವ ಅವರು ಪ್ರತಿ ತಿಂಗಳು ಎಷ್ಟು ಹಣ ಗಳಿಸುತ್ತಾರೆ ಎಂಬ ಕೌತಕ ಜನರಿಗೆ ಇದೆ.

ಹತ್ತು ಹಲವು ಸಿನಿಮಾಗಳ ಕೆಲಸಗಳಲ್ಲಿ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ತೊಡಗಿಕೊಂಡಿದ್ದಾರೆ. ಶೂಟಿಂಗ್​, ಡಬ್ಬಿಂಗ್​, ಪ್ರಮೋಷನ್​ ಮಾಡುತ್ತ ಸದಾ ಅವರು ಬ್ಯುಸಿ ಆಗಿರುತ್ತಾರೆ. ಇದರ ಜೊತೆಗೆ ಅವರು ಸೋಶಿಯಲ್​ ಮೀಡಿಯಾದಲ್ಲೂ ಆ್ಯಕ್ಟೀವ್​. ಸ್ವಂತ ಯೂಟ್ಯೂಬ್​ (YouTube) ಚಾನೆಲ್​ ಹೊಂದಿರುವ ಅದಿತಿ ಪ್ರಭುದೇವ ಅವರು ಅದರಿಂದಲೂ ಹಣ ಗಳಿಸುತ್ತಾರೆ. ಹಾಗಾದರೆ ಅವರಿಗೆ ಪ್ರತಿ ತಿಂಗಳು ಯೂಟ್ಯೂಬ್​ನಿಂದ ಬರುವ ಆದಾಯ ಎಷ್ಟು ಎಂಬ ಕೌತುಕದ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇದೆ. ಅದಕ್ಕೆ ಸ್ವತಃ ಅದಿತಿ ಉತ್ತರ ನೀಡಿದ್ದಾರೆ. ‘ಯೂಟ್ಯೂಬ್​ನಲ್ಲಿ (Aditi Prabhudeva YouTube) ನಾನು ಹೆಚ್ಚು ಗಳಿಕೆ ಮಾಡುತ್ತಿಲ್ಲ. ಆದರೆ ಅದರಲ್ಲಿ ನನಗೆ ಆತ್ಮತೃಪ್ತಿ ಜಾಸ್ತಿ ಸಿಗುತ್ತಿದೆ. ಅದರಿಂದ ನನಗೆ 40 ಸಾವಿರ ರೂಪಾಯಿ ಬರುತ್ತಿದೆ ಎಂದರೆ ಅದು ಕೂಡ ನನಗೆ ದೊಡ್ಡದು. ಪ್ರತಿ ತಿಂಗಳು ಇಎಂಐ ಕಟ್ಟುವಷ್ಟು ಹಣವನ್ನು ಗಳಿಸುತ್ತಿದ್ದೇನೆ. ಕೆಲವು ಪ್ರಾಡಕ್ಡ್​ಗಳ ಕೊಲಾಬೊರೇಷನ್​ ಕೂಡ ಬರುತ್ತದೆ. ಆರಾಮಾಗಿ ಒಂದು ಸಂಸಾರವನ್ನು ನಡೆಸುವಷ್ಟು ದುಡ್ಡು ನಾನು ಗಳಿಸುತ್ತಿದ್ದೇನೆ. ಅದಕ್ಕಾಗಿ ನಾನು ಜನರಿಗೆ ಧನ್ಯವಾದ ತಿಳಿಸುತ್ತೇನೆ. ಸಿನಿಮಾದಲ್ಲಿ ಹೀರೋಯಿನ್​ ಆಗಿ ಮಾತ್ರವಲ್ಲದೇ ಮನೆಮಗಳ ರೀತಿಯಲ್ಲಿ ಅವರು ನನ್ನನ್ನು ಇಷ್ಟಪಟ್ಟಿದ್ದಾರೆ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಇದನ್ನೂ ಓದಿ:

‘ಈಗ ಮೊಬೈಲ್​ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್​ಮೆಂಟ್​ ಬಳಿಕ ಅದಿತಿ ಮಾತು

‘ಶುರುವಿಂದ ಕೊನೆವರೆಗೂ ನಗಿಸುವ ಚಿತ್ರ ಓಲ್ಡ್​ ಮಾಂಕ್​’; ಪಾತ್ರದ ಬಗ್ಗೆ ಮಾತಾಡಿ ನಿರೀಕ್ಷೆ ಹೆಚ್ಚಿಸಿದ ಅದಿತಿ