Amulya: ಪತಿಯ ಜೊತೆ ಸರತಿ ಸಾಲಲ್ಲಿ ನಿಂತು ‘ಅಮೂಲ್ಯ’ ಮತಚಲಾವಣೆ

Updated on: Apr 26, 2024 | 9:42 AM

ಲೋಕಸಭೆ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಎಲ್ಲರೂ ಸರತಿಸಾಲಲ್ಲಿ ನಿಂತು ವೋಟ್ ಚಲಾಯಿಸುತ್ತಿದ್ದಾರೆ. ನಟಿ ಅಮೂಲ್ಯ ಅವರು ಪತಿ ಜಗದೀಶ್ ಜೊತೆ ಬಂದು ಮತ ಹಾಕಿದ್ದಾರೆ. ಆ ಸಂದರ್ಭದ ಫೋಟೋ ಇಲ್ಲಿದೆ.

ಲೋಕಸಭೆ ಚುನಾವಣೆಗೆ ಇಂದು (ಏಪ್ರಿಲ್ 26) ಎರಡನೇ ಹಂತದ ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಎಲ್ಲರೂ ಸರತಿಸಾಲಲ್ಲಿ ನಿಂತು ವೋಟ್ ಚಲಾಯಿಸುತ್ತಿದ್ದಾರೆ. ನಟಿ ಅಮೂಲ್ಯ ಅವರು ಪತಿ ಜಗದೀಶ್ ಜೊತೆ ಬಂದು ಮತ ಹಾಕಿದ್ದಾರೆ. ಬೆಂಗಳೂರಿನ ಬಿಇಟಿ ಕಾನ್ವೆಂಟ್​ನಲ್ಲಿ ಜನಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಅಮೂಲ್ಯ ಅವರು ಜನರ ಬಳಿ ಮತ ಹಾಕಿ, ತಮ್ಮ ಹಕ್ಕು ಚಲಾಯಿಸುವಂತೆ ಕೋರಿಕೊಂಡಿದ್ದಾರೆ. ಅಮೂಲ್ಯ (Amulya) ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಮಗು ಜನಿಸಿದ ಬಳಿಕ ಅವರು ನಟನೆಯಿಂದ ದೂರವೇ ಉಳಿದರು. ಸದ್ಯ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More