‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್
ನಿರ್ದೇಶಕ ಕಾಂತ ಕನ್ನಲ್ಲಿ ಅವರ ಜೊತೆಗೆ ಮೇಘನಾ ರಾಜ್ ಅವರು ಎರಡನೇ ಬಾರಿಗೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ‘ಶಬ್ದ’ ಎಂದು ಟೈಟಲ್ ಇಡಲಾಗಿದೆ.
ನಟಿ ಮೇಘನಾ ರಾಜ್ (Meghana Raj Sarja) ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಾರಣಾಂತರಗಳಿಂದ ಒಂದಷ್ಟು ತಿಂಗಳ ಕಾಲ ಅಭಿನಯದಿಂದ ಅವರು ದೂರ ಉಳಿದುಕೊಂಡಿದ್ದರು. ಈಗ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕಾಂತ ಕನ್ನಲ್ಲಿ ಜೊತೆ ಮೇಘನಾ ರಾಜ್ ಅವರು ಹೊಸದೊಂದು ಚಿತ್ರ ಮಾಡಲಿದ್ದಾರೆ. ಈ ಸಿನಿಮಾಗೆ ‘ಶಬ್ದ’ (Shabda Kannada Movie) ಎಂದು ಹೆಸರು ಇಡಲಾಗಿದೆ. ಈ ಮೊದಲು ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಕಾಂತ ಕನ್ನಲ್ಲಿ (Kantha Kannalli) ಮತ್ತು ಮೇಘನಾ ರಾಜ್ ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಮತ್ತೆ ಅದೇ ತಂಡದ ಜೊತೆ ಕೈ ಜೋಡಿಸುತ್ತಿರುವುದಕ್ಕೆ ಅವರಿಗೆ ಸಂತಸ ಇದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಈ ಸಿನಿಮಾದಲ್ಲಿ ಎಸ್. ಮಹೇಂದರ್ ಅವರು ಬಹಳ ಮುಖ್ಯವಾದ ಒಂದು ಪಾತ್ರ ಮಾಡಲಿದ್ದಾರೆ. ಅತುಲ್ ಕುಲಕರ್ಣಿ ಸಹ ಇದ್ದಾರೆ. ಇದು ಮಿಸ್ಟ್ರೀ ಪ್ರಕಾರಕ್ಕೆ ಸೇರುವ ಸಿನಿಮಾ. ಈ ಕಥೆಯನ್ನು ಒಂದೂವರೆ ವರ್ಷದ ಹಿಂದೆಯೇ ನಾನು ಕೇಳಿದ್ದೆ. ಕೊವಿಡ್ ಕಾರಣದಿಂದ ಮಾಡೋಕೆ ಸಾಧ್ಯವಾಗಿರಲಿಲ್ಲ. ಪ್ರತಿಭಾವಂತರ ಒಂದು ತಂಡ ಸೇರಿಕೊಂಡು ವಿಶೇಷವಾದ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಹೆಮ್ಮೆ ಇದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಇದನ್ನೂ ಓದಿ:
‘ಚಿರು ನನಗೋಸ್ಕರ ಕಟ್ಟಿಕೊಟ್ಟ ಕುಟುಂಬ ಇದು’; ‘ಗೋಲ್ಡನ್ ಗ್ಯಾಂಗ್’ ಶೋನಲ್ಲಿ ಮೇಘನಾ ಭಾವುಕ ಮಾತು
ಡಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಚಿರು-ರಾಯನ್ ಬಗ್ಗೆ ಮೇಘನಾ ರಾಜ್ ಸರ್ಜಾ ಹೃದಯಸ್ಪರ್ಶಿ ಮಾತು