- Kannada News Entertainment Television Meghana Raj Pannaga Bharana Prajwal Devaraj remember Chiranjeevi Sarja in Golden Gang show
‘ಚಿರು ನನಗೋಸ್ಕರ ಕಟ್ಟಿಕೊಟ್ಟ ಕುಟುಂಬ ಇದು’; ‘ಗೋಲ್ಡನ್ ಗ್ಯಾಂಗ್’ ಶೋನಲ್ಲಿ ಮೇಘನಾ ಭಾವುಕ ಮಾತು
ಜೀ ಕನ್ನಡ ವಾಹಿನಿಯ ‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಭಾಗವಹಿಸಿದ್ದಾರೆ. ಫೆ.12 ಮತ್ತು ಫೆ.13ರ ಶನಿವಾರ ಹಾಗೂ ಭಾನುವಾರ ಈ ಎಪಿಸೋಡ್ಗಳು ಪ್ರಸಾರ ಆಗಲಿವೆ.
Updated on: Feb 10, 2022 | 1:41 PM

Meghana Raj Pannaga Bharana Prajwal Devaraj remember Chiranjeevi Sarja in Golden Gang show

Meghana Raj Pannaga Bharana Prajwal Devaraj remember Chiranjeevi Sarja in Golden Gang show

‘ಸ್ನೇಹಿತರ ಗ್ರೂಪ್ ಬಗ್ಗೆ ಚಿರುಗೆ ಯಾವಾಗಲೂ ಒಂದು ಕಾನ್ಫಿಡೆನ್ಸ್ ಇತ್ತು. ತಮಗೆ ಏನೇ ಕಷ್ಟಬಂದರೂ ಫ್ರೆಂಡ್ಸ್ ಬರುತ್ತಾರೆ ಅಂತ ಅವರು ಹೇಳಿದ್ದರು. ಚಿರು ನನಗೋಸ್ಕರ ಕಟ್ಟಿಕೊಟ್ಟ ಕುಟುಂಬ ಇದು’ ಎಂದು ಮೇಘನಾ ಹೇಳಿದ್ದಾರೆ.

ಮೇಘನಾ ರಾಜ್ ಜೊತೆ ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್, ಪನ್ನಗ ಭರಣ ಕೂಡ ‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದರ ಪ್ರೋಮೋ ಈಗಾಗಲೇ ವೈರಲ್ ಆಗಿದ್ದು, ಪೂರ್ತಿ ಎಪಿಸೋಡ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

‘ನಮ್ಮ ಜೀವನದ ಒಂದು ಭಾಗವೇ ಇಲ್ಲ ಎಂಬಂತಾಗಿದೆ. ಆ ಜಾಗವನ್ನು ಬೇರೆ ಯಾರೂ ತುಂಬಿಸೋಕೆ ಆಗಲ್ಲ’ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ. ಅದೇ ರೀತಿ ಪನ್ನಗ ಭರಣ ಕೂಡ ತಮ್ಮ ಗೆಳೆಯನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಜೀವನದ ನೋವುಗಳನ್ನೆಲ್ಲ ಬದಿಗಿಟ್ಟು ನಟಿ ಮೇಘನಾ ಅವರು ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದಾರೆ.



















