ಗೋವುಗಳ ಬಗ್ಗೆ ಪವಿತ್ರಾ ಗೌಡಗೆ ಅದೆಷ್ಟು ಪ್ರೀತಿ; ಇಲ್ಲಿದೆ ವೈರಲ್ ವಿಡಿಯೋ

Updated on: Aug 09, 2025 | 8:54 AM

ನಟಿ ಪವಿತ್ರಾ ಗೌಡ ಅವರು ಈಗ ಮನೆಯಲ್ಲಿ ವಿಶೇಷವಾಗಿ ವರಲಕ್ಷ್ಮೀ ಪೂಜೆ ಮಾಡಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೆ ಜೈಲಿಗೆ ಹೋಗುವ ಭಯ ಅವರನ್ನು ಕಾಡಿದೆ. ಈಗ ಪವಿತ್ರಾ ಗೌಡ ಅವರ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಎಲ್ಲರೂ ನಟಿಯನ್ನು ಕೊಂಡಾಡುತ್ತಾ ಇದ್ದಾರೆ.

ಆಗಸ್ಟ್ 8 ವರಲಕ್ಷ್ಮೀ ಪೂಜೆ ನಡೆದಿದೆ. ಅನೇಕರು ಮನೆಯಲ್ಲಿ ಪೂಜೆ ಮಾಡಿದ್ದಾರೆ. ಇದಕ್ಕೆ ನಟಿ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಕೂಡ ಹೊರತಾಗಿಲ್ಲ. ಅವರು ಮನೆ ಬಳಿ ಬಂದ ಗೋವಿಗೆ ಪೂಜೆ ಮಾಡಿದ್ದಾರೆ. ಪ್ರೀತಿಯಿಂದ ಬಾಳೆ ಹಣ್ಣು ನೀಡಿದ್ದಾರೆ. ಗೋವಿನ ಬಗ್ಗೆ ಪವಿತ್ರಾಗೆ ಸಾಕಷ್ಟು ಪ್ರೀತಿ ಇದೆ ಎಂಬುದನ್ನು ಇದು ತೋರಿಸುತ್ತದೆ. ಸದ್ಯ ಪವಿತ್ರಾ ಟೆನ್ಶನ್​ನಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಕರ್ನಾಟಕ ಹೈಕೋರ್ಟ್ ಕೊಟ್ಟ ಜಾಮೀನನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಲಾಗಿದೆ. ಶೀಘ್ರವೇ ಇದರ ತೀರ್ಪು ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.