ನಟಿ ಸವಿ ಮಾದಪ್ಪ ಆತ್ಮಹತ್ಯೆ: ಮಗಳನ್ನು ನೆನೆದು ಆಸ್ಪತ್ರೆ ಎದುರು ಕಣ್ಣೀರಿಟ್ಟ ತಾಯಿ

Edited By:

Updated on: Oct 01, 2021 | 10:01 AM

ಮೂಲತಃ ಕುಶಾಲ ನಗರದವರಾದ ಸವಿ ಮಾದಪ್ಪ ಚೌಕಟ್ಟು, ಫನ್​ ಮುಂತಾದ ಸಿನಿಮಾದಲ್ಲಿ ನಟಿಸಿದ್ದರು. ಮಗಳ ಸಾವಿನ ಸುದ್ದಿ ತಿಳಿದ ಬಳಿಕ ಅವರ ಪೋಷಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಸಾವಿನ ಸುದ್ದಿ ಅವರ ಕುಟುಂಬಕ್ಕೆ ಸಿಡಿಲಿನಂತೆ ಬಂದೆರಗಿದೆ. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಆದರೆ ಮಗಳ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸವಿ ಮಾದಪ್ಪ ಬಾಯ್‌ಫ್ರೆಂಡ್‌ ವಿವೇಕ್ ಜತೆ ವಾಸವಿದ್ದರು ಎನ್ನಲಾಗಿದೆ. ಊಟ ತರುವಂತೆ ವಿವೇಕ್​ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಕುಶಾಲ ನಗರದವರಾದ ಸವಿ ಮಾದಪ್ಪ ಚೌಕಟ್ಟು, ಫನ್​ ಮುಂತಾದ ಸಿನಿಮಾದಲ್ಲಿ ನಟಿಸಿದ್ದರು. ಮಗಳ ಸಾವಿನ ಸುದ್ದಿ ತಿಳಿದ ಬಳಿಕ ಅವರ ಪೋಷಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಸವಿ ಮಾದಪ್ಪ ಅವರ ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆ ಎದುರಿನಲ್ಲಿ ಅವರ ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಸಾವಿನ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ:

ಆತ್ಮಹತ್ಯೆ ಮಾಡಿಕೊಂಡ ನಟಿ ಸವಿ ಮಾದಪ್ಪ ಡೆತ್​ ನೋಟ್​ ಪತ್ತೆ; ಎಲ್ಲರಲ್ಲೂ ಕ್ಷಮೆ ಕೇಳಿದ್ದೇಕೆ?

ಆತ್ಮಹತ್ಯೆಗೂ ಮುನ್ನ ಅಪ್ಪನಿಂದ 1 ಲಕ್ಷ ರೂ. ಪಡೆದಿದ್ದ ನಟಿ ಸವಿ ಮಾದಪ್ಪ; ಸಾವಿನ ಸುತ್ತ ಹೆಚ್ಚಿತು ಅನುಮಾನ

Published on: Oct 01, 2021 09:59 AM
Follow Us
Web contact

TV9 Kannada

Read More