ಟಿವಿ9 ಎಕ್ಸ್ಪೋ ಬಗ್ಗೆ ನಟಿ ಶರಣ್ಯಾ ಶೆಟ್ಟಿ ಮೆಚ್ಚುಗೆ ಮಾತು
Sharanya Shetty: ಟಿವಿ9 ಎಕ್ಸ್ಪೋನಲ್ಲಿ ಭಾಗಿಯಾಗಿದ್ದ ನಟಿ ಶರಣ್ಯಾ ಶೆಟ್ಟಿ, ತಮ್ಮ ಅನುಭವವನ್ನು ಹಂಚಿಕೊಂಡರು. ಮನೆ ಕಟ್ಟುವ ಕನಸು ಹೊಂದಿರುವವರಿಗೆ ಟಿವಿ9 ಮಾಡುತ್ತಿರುವ ಸಹಾಯವನ್ನು ಮೆಚ್ಚಿ ಕೊಂಡಾಡಿದರು.
ಇಂದು ನಡೆದ ಟಿವಿ9 ಎಕ್ಸ್ಪೋನಲ್ಲಿ ನಟ ಕೋಮಲ್ (Komal), ಶರಣ್ಯಾ ಸೇರಿದಂತೆ ಇನ್ನೂ ಕೆಲವು ತಾರೆಯರ ಜೊತೆಗೆ ಉದ್ಯಮಿಗಳು ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟಿ ಶರಣ್ಯಾ ಟಿವಿ9 ಎಕ್ಸ್ಪೋ ಬಗ್ಗೆ ಮಾತನಾಡಿ ಬಹುವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆ ನಿರ್ಮಾಣದ ಕನಸು, ಅದನ್ನು ಸಾಕಾರಗೊಳಿಸಬೇಕಾದ ಬಗೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ ಶರಣ್ಯ, ಮನೆ ಕಟ್ಟುವ ಕನಸು ಕಾಣುತ್ತಿರುವವರಿಗೆ ಟಿವಿ9 ಮಾಡುತ್ತಿರುವ ಸಹಾಯ, ನೀಡುತ್ತಿರುವ ಮಾಹಿತಿಗಳ ಬಗ್ಗೆ ಶರಣ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶರಣ್ಯ ಪ್ರಸ್ತುತ ನಟ ಗಣೇಶ್ ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ನಗುವಿನ ಹೂಗಳ ಮೇಲೆ’ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ