ಚಡಚಣದಲ್ಲಿ ಜನಸ್ಪಂದನ ಸಭೆ ನಡೆಸಿ ಆ ಭಾಗದ ಗೂಂಡಾಗಳನ್ನು ಎಚ್ಚರಿಸಿದರು ಎಡಿಜಿಪಿ ಅಲೋಕ್ ಕುಮಾರ್
ಜಿಲ್ಲೆಯ ಚಡಚಣದ ಪೊಲೀಸ ಠಾಣೆ ಆವರಣದಲ್ಲಿ ಸಭೆ ನಡೆಸಿ ಭೀಮಾ ತೀರದ ಹಂತಕರೆಂದೇ ಹೆಸರಾಗಿರುವ ಈ ಭಾಗದ ರೌಡಿಗಳಿಗೆ ತಮ್ಮ ವರ್ತನೆ ಬದಲಾಯಿಸಿಕೊಂಡು ಉತ್ತಮ ನಾಗರಿಕರಂತೆ ಜೀವನ ನಡೆಸಲು ಎಚ್ಚರಿಕೆ ನೀಡಿದರು
Vijayapura: ಮಂಗಳವಾರ ಕಲಬುರಗಿಯಲ್ಲಿ ಜನಸ್ಪಂದನ ಸಭೆ ಸಭೆ ನಡೆಸಿದ ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಇಂದು (ಬುಧವಾರ) ವಿಜಯಪುರ (Vijayapura) ಜಿಲ್ಲೆಯ ಚಡಚಣದ ಪೊಲೀಸ ಠಾಣೆ ಆವರಣದಲ್ಲಿ ಸಭೆ ನಡೆಸಿ ಭೀಮಾ ತೀರದ ಹಂತಕರೆಂದೇ ಹೆಸರಾಗಿರುವ ಈ ಭಾಗದ ರೌಡಿಗಳಿಗೆ ತಮ್ಮ ವರ್ತನೆ ಬದಲಾಯಿಸಿಕೊಂಡು ಉತ್ತಮ ನಾಗರಿಕರಂತೆ ಜೀವನ ನಡೆಸಲು ಎಚ್ಚರಿಕೆ ನೀಡಿದರು. ದುಷ್ಕೃತ್ಯಗಳಲ್ಲಿ ತೊಡಗುವವರನ್ನು ತಾವು ಬಿಡುವುದಿಲ್ಲ ಎಂದು ಅಲೋಕ್ ಕುಮಾರ್ ಹೇಳಿದರು.