ಮಳೆ ಹೊಡತಕ್ಕೆ ಚಿಕ್ಕಮಗಳೂರಿನ ಕೊಂಕಳಮನೆಯಲ್ಲಿ ಭೂಮಿ ಕುಸಿತ, ಮನೆಗಳಲ್ಲಿ ಬಿರುಕು

ಮಳೆ ಹೊಡತಕ್ಕೆ ಚಿಕ್ಕಮಗಳೂರಿನ ಕೊಂಕಳಮನೆಯಲ್ಲಿ ಭೂಮಿ ಕುಸಿತ, ಮನೆಗಳಲ್ಲಿ ಬಿರುಕು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2022 | 1:25 PM

ಭೂಮಿ ಕುಸಿದ ಕಾರಣ ಇಲ್ಲಿದ್ದ ಕಾಂಕ್ರೀಟ್ ರಸ್ತೆ ಹಾಳಾಗಿ ಕೊಂಕಳಮನೆ ಮತ್ತು ಗಂಧರ್ವಗಿರಿ ನಡುವಿನ ಸಂಪರ್ಕ ಕಡಿದುಹೋಗಿದೆ. ಮರಗಳು ಧರೆಗುರುಳಿವೆ ಮತ್ತು ಇಲ್ಲಿನ ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಚಿಕ್ಕಮಗಳೂರು: ಮಲೆನಾಡ ಭಾಗದಲ್ಲಿ (Malnad region) ಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ಚಿಕ್ಕಮಗಳೂರು ತಾಲ್ಲೂಕಿನ ಕೊಂಕಳಮನೆಯಲ್ಲಿ (Konkalumane) ಭೂಮಿ ವೃತ್ತಾಕಾರದಲ್ಲಿ ಕುಸಿದುಬಿಟ್ಟಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಭೂಮಿ ಕುಸಿದ ಕಾರಣ ಇಲ್ಲಿದ್ದ ಕಾಂಕ್ರೀಟ್ ರಸ್ತೆ ಹಾಳಾಗಿ ಕೊಂಕಳಮನೆ ಮತ್ತು ಗಂಧರ್ವಗಿರಿ ನಡುವಿನ ಸಂಪರ್ಕ ಕಡಿದುಹೋಗಿದೆ. ಮರಗಳು ಧರೆಗುರುಳಿವೆ ಮತ್ತು ಇಲ್ಲಿನ ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.