ಮೃತನ ಕುಟುಂಬಕ್ಕೆ ಪರಿಹಾರ ನೀಡದ ವಾಯುವ್ಯ ಸಾರಿಗೆ ನಿಗಮದ ಬಸ್ಸನ್ನು ಜಪ್ತಿ ಮಾಡಿಸಿದ ನ್ಯಾಯಾಲಯ

ಮೃತನ ಕುಟುಂಬಕ್ಕೆ ಪರಿಹಾರ ನೀಡದ ವಾಯುವ್ಯ ಸಾರಿಗೆ ನಿಗಮದ ಬಸ್ಸನ್ನು ಜಪ್ತಿ ಮಾಡಿಸಿದ ನ್ಯಾಯಾಲಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2022 | 4:00 PM

ಹರಿಹರದ ನ್ಯಾಯಾಲಯ ನಿಗಮದ ಬಸ್ಸೊಂದನ್ನು ಜಪ್ತಿ ಮಾಡುವಂತೆ ಆದೇಶ ನೀಡಿದ ಕಾರಣ ನ್ಯಾಯಲಯದ ಅಮೀನ್ ಮೃತನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೆಎ 27 ಎಫ್ 395 ನಂಬರ್ ನ ಬಸ್ಸನ್ನು ಸೀಜ್ ಮಾಡಿದರು.

ದಾವಣಗೆರೆ: ಇದ್ಯಾವ ಸೀಮೆ ನ್ಯಾಯ ಅಂತ ಮಾತ್ರ ಕೇಳ್ಬೇಡಿ ಮಾರಾಯ್ರೇ. ಯಾಕೆಂದರೆ ಇದು ಕೋರ್ಟಿನ ಆದೇಶ. ವಾಯುವ್ಯ ರಸ್ತೆ ಸಾರಿಗೆ ಸಂಚಾರದ (NWRTC) ಬಸ್ಸೊಂದು ಹರಿಹರ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹರಿದು ಅವನು ಮೃತಪಟ್ಟು 6 ವರ್ಷ ಕಳೆದರೂ ಉಚ್ಚ ನ್ಯಾಯಾಲಯದ (high court) ಆದೇಶದ ಪ್ರಕಾರ ನಿಗಮದಿಂದ ಇದುವರೆಗೆ ಪರಿಹಾರ (compensation) ಸಿಗದ ಕಾರಣ ಹರಿಹರದ ನ್ಯಾಯಾಲಯ ನಿಗಮದ ಬಸ್ಸೊಂದನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಹಾಗಾಗಿ, ನ್ಯಾಯಲಯದ ಅಮೀನ್ ಮೃತನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೆಎ 27 ಎಫ್ 395 ನಂಬರ್ ನ ಬಸ್ಸನ್ನು ಸೀಜ್ ಮಾಡಿದರು.