ಆಸ್ಪತ್ರೆಯಲ್ಲಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದ ಬಳಿಕ ನಿರ್ಮಾಲಾನಂದ ಶ್ರೀ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು

|

Updated on: Aug 31, 2023 | 12:40 PM

ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ, ಅತಂಕಪಡುವ ಅವಶ್ಯಕತೆಯಿಲ್ಲ, ಊಟ-ತಿಂಡಿ ಸೇವಿಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು. ಅವರನ್ನು ತೀವ್ರ ನಿಗಾ ಘಟಕದಿಂದ ವಾರ್ಡ್ ಶಿಫ್ಟ್ ಮಾಡಲಾಗಿದೆ, ವಿಶ್ರಾಂತಿಯ ಅವಶ್ಯಕತೆ ಇರೋದ್ರಿಂದ ಆಸ್ಪತ್ರೆಯಲ್ಲೇ ಇಟ್ಟಿಕೊಳ್ಳಲಾಗಿದೆ, ಎರಡು ದಿನಗಳ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಶ್ರೀಗಳ ಜೊತೆ ಬಂದಿದ್ದ ವೈದ್ಯ ಹೇಳಿದರು.

ಬೆಂಗಳೂರು: ಆದಿ ಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದ ಶ್ರೀ (Nirmalananda Shri) ಇಂದು ನಗರಕ್ಕೆ ಆಗಮಿಸಿ ಜಯನಗರದ ಅಪೊಲ್ಲೋ ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಆರೋಗ್ಯ ವಿಚಾರಿಸಿದರು. ಈಗಾಗಲೇ ವರದಿಯಾಗಿರುವಂತೆ ಬುಧವಾರ ಬೆಳಗಿನ ಜಾವ ಬಳಲಿಕೆ ಮತ್ತು ಚಡಪಡಿಕೆ ಬಗ್ಗೆ ದೂರಿದ ಜೆಡಿಎಸ್ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ ಡಿಕೆಯವರನ್ನು ಭೇಟಿಯಾಗಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರೊಬ್ಬರೊಂದಿಗೆ ಹೊರಬಂದ ಶ್ರೀಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ (stable), ಅತಂಕಪಡುವ ಅವಶ್ಯಕತೆಯಿಲ್ಲ, ಊಟ-ತಿಂಡಿ ಸೇವಿಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು. ಅವರನ್ನು ತೀವ್ರ ನಿಗಾ ಘಟಕದಿಂದ ವಾರ್ಡ್ ಶಿಫ್ಟ್ ಮಾಡಲಾಗಿದೆ, ವಿಶ್ರಾಂತಿಯ ಅವಶ್ಯಕತೆ ಇರೋದ್ರಿಂದ ಆಸ್ಪತ್ರೆಯಲ್ಲೇ ಇಟ್ಟಿಕೊಳ್ಳಲಾಗಿದೆ, ಎರಡು ದಿನಗಳ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಶ್ರೀಗಳ ಜೊತೆ ಬಂದಿದ್ದ ವೈದ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 31, 2023 12:36 PM